ಇಂದು ಸಂದಲ್ ನಾಳೆ ಚಿರಾಗ್
ಕಲಬುರಗಿ : ಇಲ್ಲಿನ ವಿಠ್ಠಲ್ ನಗರದ ೨ನೇ ಕ್ರಾಸ್‌ದಲ್ಲಿರುವ ಹಜರತ್ ಶೇಖ್ ಉಲ್ ಮಶೈಖಾ ಮಕ್ಕದ್ಧುಮ್ ಸಿಕಿಂದರ್ ಶಹಾ ದರ್ಗಾದ ಉರುಸ್ ಆರಂಭಗೊAಡಿದ್ದು, ಆ.೫ ರಂದು ಸಂದಲ್ ಮೆರವಣಿಗೆ ನಡೆಯಲಿದೆ. ೬ ರಂದು ಬೆಳಗ್ಗೆ ೬ ಗಂಟೆಗೆ ಚಿರಾಗ್ ಉತ್ಸವ ಜರುಗಲಿದೆ. ಸಂಜೆ ೬ ಗಂಟೆಗೆ ಮೆಹಫಿಲ್ ಕ್ಯೂಲ್ ಕಾರ್ಯಕ್ರಮ ಆಯೋಜಿಸಲಾಗಿದೆ. ದರ್ಗಾ ಉರುಸ್ ಖ್ವಾಜಾ ಬಂದಾ ನವಾಜ್ ದರ್ಗಾದ ಸಜ್ಜಾದೆ ನಶೀನ್ ಡಾ.ಸೈಯದ್ ಷಾ ಗೇಸುದರಾಜ್ ಖುಸ್ರೋ ಹುಸೇನಿ ಸಾಹೇಬ್ ಅವರ ಸನ್ನಿಧಾನದಲ್ಲಿ ನಡೆಯಲಿದೆ. ಭಕ್ತರು ಪಾಲ್ಗೊಳ್ಳುವಂತೆ ಮುತುವಲ್ಲಿ ತಿಳಿಸಿದ್ದಾರೆ.
==