

ಮೈಸೂರು: ರಂಗವಲ್ಲಿ ತಂಡದ ವತಿಯಿಂದ ರಾಜ್ಯ ಮಟ್ಟದ ನಾಟಕೋತ್ಸವವನ್ನು ಆ.9ರಿಂದ 13ರವರೆಗೆ ನಗರದ ಕಲಾ ಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಆ.9ರಂದು ಸಂಜೆ 5ಕ್ಕೆ ನಾಯಕ ಡಾಲಿ ಧನಂಜಯ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುವರು ಎಂದು ತಂಡದ ಮಂಜುನಾಥಶಾಸ್ತ್ರಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು
ಆ.10ರಂದು ಮಹದೇವ ಹಡಪದ ಅವರ ‘ನಾ ರಾಜಗುರು’ ನಾಟಕ ಪ್ರದರ್ಶನ, ಆ.11ರಂದು ಅತೋಲ್ ಫುಗಾರ್ಡ್ ರಚನೆಯ ‘ದ್ವೀಪ’ ನಾಟಕ ಪ್ರದರ್ಶನ, ಆ.12ರಂದು ಡಾ. ಹೇಮಾ ಪಟ್ಟಣಶೆಟ್ಟಿ ರಚನೆಯ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ, ಆ.13ರ ಪಿ. ಲಂಕೇಶರ ಕಥೆ ಆಧರಿಸಿದ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲ’ ನಾಟಕ ಪ್ರದರ್ಶನಗೊಳ್ಳಲಿವೆ. ಈ ಎಲ್ಲ ನಾಟಕಗಳು ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿವೆ. ಟಿಕೆಟ್ ದರ 100 ರೂ. ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.