ಆ.27ರಂದು ಸಿಎಸ್‌ಐ ಬೆಳ್ಳಿ ಸಂಭ್ರಮಾಚರಣೆ

Published on

ಮೈಸೂರು: ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ(ಸಿಎಸ್‌ಐ) ಮೈಸೂರು ಶಾಖೆ ಆರಂಭವಾಗಿ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆ.27ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಬೆಳ್ಳಿಹಬ್ಬ ಸಂಭ್ರಮಾಚರಣೆ ಆಯೋಜಿಸಲಾಗಿದೆ.
ಆ.27ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಮಾರಂಭ ಉದ್ಘಾಟಿಸಲಿದ್ದಾರೆ. ಮೈಸೂರು ಶಾಖೆ ಬೆಳವಣಿಗೆಗೆ ಕಾರಣರಾದ 12 ಜನ ಸಂಸ್ಥಾಪಕ ಸದಸ್ಯರು ಮತ್ತು 20 ಮಾಜಿ ಅಧ್ಯಕ್ಷರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುವುದು ಎಂದು ಮೈಸೂರು ಶಾಖೆ ಅಧ್ಯಕ್ಷೆ ಡಾ.ಜೆ.ವೀನು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೃದಯಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ವೈದ್ಯಕೀಯ ಆವಿಷ್ಕಾರಗಳ ಬಗ್ಗೆ ತಜ್ಞ ವೈದ್ಯರಿಂದ ಉಪನ್ಯಾಸ, ಹೃದ್ರೋಗ ತಜ್ಞರ ಸೇವೆ, ಅಭಿವೃದ್ಧಿಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದರು. ಮೈಸೂರು ಶಾಖೆಯ ಉಪಾಧ್ಯಕ್ಷೆ ಡಾ.ಡಿ.ಶಶಿರೇಖಾ, ಕಾರ್ಯದರ್ಶಿ ಡಾ.ಎಸ್.ಹೇಮಾ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ಬಿ.ನಿಖಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net