ಆ.26ರಂದು ಉಗಾರ ಉಪವಿಭಾಗದಲ್ಲಿ ವಿದ್ಯುತ್ ವ್ಯತ್ಯಯ

HESCOM
Published on

ಬೆಳಗಾವಿ: ಹೆಸ್ಕಾಂ ಉಗಾರ ಉಪವಿಭಾಗದಲ್ಲಿ ಬರುವ 110/33/11 ಕೆವ್ಹಿ ಉಗಾರ ಉಪ ಕೇಂದ್ರಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ವಿವಿಧ ಗ್ರಾಮಗಳಲ್ಲಿ ಶನಿವಾರ (ಆ.26)ರಂದು ಬೆಳ್ಳಿಗೆ 9 ಗಂಟೆಯಿಂದ ಸಂಜೆ 5 ಘಂಟೆಯ ವರೆಗೆ ವಿದ್ಯುತ್ ವ್ಯತ್ಯಯಾಗಲಿದೆ. ಹೆಸ್ಕಾಂ ಉಗಾರ ಉಪವಿಭಾಗದ ಕಕ್ಷೆಯಲ್ಲಿರುವ ಗ್ರಾಮಗಳು ಶೇಡಬಾಳ, ಶೇಡಬಾಳ ಸ್ಟೇಷನ್, ಕಲ್ಲಾಳ, ಉಪ್ಪಾರವಾಡಿ, ದೊಂಡಿಮಡ್ಡಿ, ಮಂಗಳೊಳಿ, ಲೋಕುರ, ಉಗಾರ ಕೆ.ಎಚ್, ಫರಿದ್ ಖಾನವಾಡಿ, ವಿನಾಯಕವಾಡಿ, ಉಗಾರ ಬಿ.ಕೆ, ಪರಮೇಶ್ವರವಾಡಿ, ಕುಸನಾಳ, ಮತ್ತು ಮೋಳವಾಡ, ಹಾಗೂ ಎಲ್ಲಾ ನೀರಾವರಿ ಪಂಪಸೆಟ್‌ಗಳಿಗೆ ಸರಬರಾಜು ಆಗುವ ವಿದ್ಯುತ್ ಮಾರ್ಗಗಳ ವಿದ್ಯುತ್ ವ್ಯತ್ಯಯಾಗಲಿದೆ ಎಂದು ಹುವಿಸಕಂನಿ ಉಗಾರ ಕಾರ್ಯ ಮತ್ತು ಪಾಲನೆ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net