

ಹಾಸನ: ಸಪ್ತಪದಿ ಫೌಂಡೇಷನ್ ಟ್ರಸ್ಟ್ ವತಿಯಿಂದ 49ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶವನ್ನು ನಗರದಲ್ಲಿ ಆ.26, 27ರಂದು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎಸ್.ಭಾರಧ್ವಾಜ್ ತಿಳಿಸಿದರು.
ಜಿಲ್ಲಾ ಬ್ರಾಹ್ಮಣಸಭಾ, ಹೊಯ್ಸಳ ಕಾರ್ನಾಟಕ ಸಂಘ, ಒಬ್ಬೂರಕಮ್ಮೆ ಸೇವಾ ಸಂಘ, ಜಿಲ್ಲಾ ಪಾಕ ತಜ್ಞರ ಸಂಘ, ಜಿಲ್ಲಾ ಅರ್ಚಕರ ಸಂಘಗಳ ಸಹಯೋಗದಲ್ಲಿ ನಗರದ ಶೃಂಗೇರಿ ಶಂಕರ ಮಠದಲ್ಲಿ ಎರಡು ದಿನಗಳ ಕಾಲ ವಧು-ವರಾನ್ವೇಷಣಾ ಸಮಾವೇಶ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆಣ್ಣುಮಕ್ಕಳಿಗೆ, ಅಂಗವಿಕಲರಿಗೆ ಉಚಿತ ನೋಂದಾಣಿ ಮತ್ತು ಪ್ರವೇಶವನ್ನು ಕಲ್ಪಿಸಲಾಗಿದೆ. ಸಮಾವೇಶದಲ್ಲಿ ಭಾಗವಹಿಸುವವರು ಆ.20 ರಿಂದ 25ರ ವರೆಗೆ ಫೋಟೋ, ಜಾತಕ, ಸ್ವವಿವರ ನೀಡಿ ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ 9449425536, 9380353350 ಸಂಪರ್ಕಿಸಬಹುದಾಗಿದೆ. ವಿಪ್ರ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಕಾಶವನ್ನು ಬಳಿಸಿಕೊಳ್ಳುವಂತೆ ಮನವಿ ಮಾಡಿದರು.
ಟ್ರಸ್ಟ್ ಕಳೆದ 9 ವರ್ಷಗಳಿಂದ ವಧು-ವರರ ಸಮಾವೇಶ ಹಮ್ಮಿಕೊಳ್ಳುವ ಮೂಲಕ ನೂರಾರು ಜೋಡಿಗಳ ವಿವಾಹ ನೆರವೇರಿಸಲಾಗಿದೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ವಧು-ವರ ನೇರವಾಗಿ ಸಮಲೋಚನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಎನ್.ವೆಂಟಕೇಶ್‌ಮೂರ್ತಿ, ಪಿ.ಎಸ್.ವೆಂಕಟೇಶ್, ಜಿ.ಸುರೇಶ್, ಸುದೀಂದ್ರ, ಎಸ್.ಬಾಲಕೃಷ್ಣ ಹಾಜರಿದ್ದರು.