

ಹೊಳೆನರಸೀಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ರೋಡ್ ಟ್ರಸ್ಟ್‌ನಿಂದ ಪಟ್ಟಣದಲ್ಲಿ ಆ.24ರಿಂದ 8 ದಿನಗಳ ಕಾಲ ಮದ್ಯವರ್ಜನ ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಯೋಜನಾಧಿಕಾರಿ ಸೂರ್ಯನಾರಾಯಣ ತಿಳಿಸಿದರು.
ಪಟ್ಟಣದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದುಶ್ಚಟಕ್ಕೆ ಒಳಗಾದ ವ್ಯಕ್ತಿಗಳ ಮನಪರಿವರ್ತನೆಗೆ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಶಿಬಿರಕ್ಕೆ ಸ್ಥಳಾವಕಾಶ, ಸಂಪನ್ಮೂಲ, ಶಿಬಿರಾರ್ಥಿಗಳು ಹಾಗೂ ಕುಟುಂಬ ಸದಸ್ಯರ ಒಪ್ಪಿಗೆ, ದಿನನಿತ್ಯದ ತಿಂಡಿ, ಊಟದ ವ್ಯವಸ್ಥೆ ಮಾಡಬೇಕಿರುತ್ತೆ. ಹೀಗಾಗಿ ಸಭೆಯಲ್ಲಿ ಉಪಸ್ಥಿತರಿರುವ ನಿಮ್ಮ ಸಹಕಾರ ಹಾಗೂ ಸಲಹೆಗಳು ಅಗತ್ಯವಾಗಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಪುಟ್ಟಸೋಮಪ್ಪ, ಸದಸ್ಯರಾದ ಚನ್ನೇಗೌಡ, ಆರ್.ಬಿ.ಪುಟ್ಟೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಿರೂಪಾಕ್ಷ, ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ, ಪುರಸಭೆ ಸದಸ್ಯ ಶ್ರೀಧರ್, ವಕೀಲರಾದ ಹರಿಣಾಕ್ಷಿ, ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸತೀಶ್, ಸದಸ್ಯರಾದ ವಿಜಯಕುಮಾರ್ ಹಾಗೂ ಮುಕುಂದ, ಮುರುಳೀಧರ ಗುಪ್ತ, ಪ್ರೇಮಾ ಮಂಜುನಾಥ್ ಇತರರು ಇದ್ದರು.