ಆ.15ರೊಳಗೆ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೂ ನೀರು

CTD MLA CHANDARAPPA----
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೂ ಆಗಸ್ಟ್ 15ರೊಳಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸಲಾಗುವುದು ಎಂದು ಶಾ ಸಕ ಡಾ.ಎಂ.ಚಂದ್ರಪ್ಪ ಹೇಳಿದರು. ತಾಲೂಕಿನ ಅಪ್ಪರಸನಹಳ್ಳಿ ಗ್ರಾಮದ ಸಮೀಪ 1.50 ಕೋಟಿ ರೂ.ವೆಚ್ಚದಲ್ಲಿ ಕಾಟಯ್ಯನಕೆರೆ ಕೆರೆ ಅಭಿ ವೃ ದ್ಧಿ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,367 ಕೋಟಿ ರೂ.ವೆಚ್ಚದಲ್ಲಿ ಹಿರಿಯೂರು ವಿವಿ ಸಾಗರದಿಂದ ತಾಲೂಕಿ ನಾದ್ಯಂತ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು.

ಕೆರೆ ಕೆಳಗಿರುವ ಹಳ್ಳಕ್ಕೆ ಡ್ಯಾಂ ಕಟ್ಟಿದ್ದರಿಂದ ಕಾಟಯ್ಯನಕೆರೆ ಭರ್ತಿಯಾಗಿದೆ. ಮಳೆ ನೀರು ವ್ಯರ್ಥ ಹರಿದು ಹೋಗುವುದನ್ನು ತಡೆಯಲು ತಾ ಲೂಕಿನಾದ್ಯಂತ ಚೆಕ್‌ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಶಾಸಕನಾದ ಬಳಿಕ ತಾಲೂಕಿನಾದ್ಯಂತ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದೇನೆ. ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲೂ ಇಂತಹ ರಸ್ತೆಗಳಿಲ್ಲ ಎಂದರು. ಗ್ರಾಪಂ ಸದಸ್ಯರಾದ ದಯಾನಂದ್,ಓಂಕಾರಪ್ಪ, ಮಂಜುಳಾ ಅಜ್ಜಯ್ಯ, ತಾಪಂ ಮಾಜಿ ಸದ ಸ್ಯರಾದ ಶಿವಕುಮಾರ, ಕೃಷ್ಣಮೂರ್ತಿ,ಮುನೀಶ್ವರಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳಾದ ನಾಗರಾಜ್,ನವೀನ್ ಗ್ರಾಮಸ್ಥರು ಇ ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net