ಆ.15ರಂದು ಹಳೆ ಸುಮಧುರ ಕನ್ನಡ, ಹಿಂದಿ ಚಲನಚಿತ್ರ ಗೀತೆ ಸಂಗಮ

Published on

ಮೈಸೂರು: ಸ್ವಾತಂತ್ರೃ ದಿನಾಚರಣೆ ಅಂಗವಾಗಿ ನಗರದ ಭೂಮಿಕಾ ಅಸೋಸಿಯೇಟ್ಸ್ ಮತ್ತು ದಿ. ಮೈಕ್ ಚಂದ್ರು ಗೆಳೆಯರ ಬಳಗದಿಂದ ಆ.15ರಂದು ಹಳೆ ಸುಮಧುರ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಸಂಜೆ 5ರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಿದಮ್ ಪ್ಯಾಡ್ ಕಲಾವಿದ ವಿನಯ್ ರಂಗಧೋಳ್ ಸಾರಥ್ಯದಲ್ಲಿ ಹಾಸ್ಯ ಕಲಾವಿದ ಮೈಸೂರು ಆನಂದ್, ಹಂಸಿನಿ ಎಸ್.ಕುಮಾರ್, ನಿತಿನ್ ರಾಜಾರಾಂ ಶಾಸ್ತ್ರಿ, ದಿವ್ಯ ಸಚ್ಚಿದಾನಂದ, ಶಬ್ಬೀರ್, ಸಿಂಚನ ಕಸ್ತೂರಿ, ರಾಮಚಂದ್ರ ಇತರ ಕಲಾವಿರರು ಭಾಗವಹಿಸಲಿದ್ದಾರೆ ಎಂದು
ಆಯೋಜಕರಾದ ಎಚ್.ಅಶ್ವತ್ಥ್ ನಾರಾಯಣ್, ಆನಂದ್, ಕೆ.ಎಸ್. ಸುರೇಶ್, ವಾಸು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net