

ಚಿಕ್ಕಮಗಳೂರು: ಸಂಯಮವೇ ಜೀವನ. ಅಹಿಂಸೆ, ಸತ್ಯ, ಬ್ರಹ್ಮಚರ್ಯದಿಂದ ಸಾಧನೆ ಸಾಧ್ಯ. ಉತ್ತಮ ಸಮಾಜ ನಿರ್ಮಾಣದ ಉz್ದೆÃಶದಿಂದ ಸತ್ಯ, ಅಹಿಂಸೆ, ಸಂಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುನಿಶ್ರೀ ಮೋಹಜಿತ್ ಕುಮಾರ್ ಜೀ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ತೇರಾಪಂಥ್ ಮಹಾಸಭಾ ವತಿಯಿಂದ ಮುನಿಶ್ರೀ ಮೋಹಜಿತ್ ಕುಮಾರ್ ಜೀ ಅವರು ದೀಕ್ಷೆ ಸ್ವೀಕರಿಸಿ ೫೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ದೀಕ್ಷಾ ಸ್ವರ್ಣ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಅಹಿಂಸೆ, ಸತ್ಯ ಹಾಗೂ ಸಂಯಮ ಪ್ರಸಾರ ಮಾಡುವ ಕಾರ್ಯವನ್ನು ನಡೆಸುತ್ತಿz್ದÉÃವೆ. ಇದಕ್ಕಾಗಿಯೇ ಸಾವಿರಾರು ಕಿಲೋಮೀಟರ್ ಯಾತ್ರೆಯನ್ನು ನಡೆಸಿz್ದÉÃವೆ. ಉತ್ತಮ ಸಮಾಜ ನಿರ್ಮಾಣವೇ ಸಾಧುಸಂತರ ಉz್ದÉÃಶ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಸಾಧುಸಂತರಿಗೆ ವಿಶೇಷ ಸ್ಥಾನಮಾನವಿದೆ. ಸಾಧು ಸಂತರು ಜನರ ಒಳಿತಿಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸತ್ಯ, ಅಹಿಂಸೆ, ಸಂಯಮ ಅಳವಡಿಸಿಕೊಂಡರೆ ಜೀವನ ಪಾವನವಾಗುವ ಜೊತೆಗೆ ಉತ್ತಮ ಸಮಾಜವು ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಬಸವ ತತ್ವ ಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಜೈನ ಎಂದಾಕ್ಷಣ ಆದಿ ತೀರ್ಥಂಕರರು, ಮಹಾತೀರ್ಥಂಕರರು ಹಾಗೂ ಶ್ರವಣಬೆಳಗೊಳದ ಬಾಹುಬಲಿ ನೆನಪಾಗುತ್ತಾರೆ. ಬಾಹುಬಲಿಯನ್ನು ಪಂಪ ತನ್ನ ಸಾಹಿತ್ಯದ ಮೂಲಕ ಸುವರ್ಣಾಕ್ಷರದಲ್ಲಿ ಹಿಡಿದಿಟ್ಟಿದ್ದಾನೆ. ಬಾಹುಬಲಿ ಜೀವನದ ಎಲ್ಲಾ ಅಡೆತಡೆಗಳನ್ನು ದಾಟಿಕೊಂಡು ಮಹಾಪರಿನಿರ್ವಾಣ ಹೊಂದುತ್ತಾನೆ ಎಂಬುದನ್ನು ಪಂಪ ತನ್ನ ಆದಿಪುರಾಣದಲ್ಲಿ ತೆರೆದಿಟ್ಟಿದ್ದಾನೆ ಎಂದು ಸ್ಮರಿಸಿದರು.
ಕರ್ನಾಟಕದಲ್ಲಿ ವೈರಾಧ್ಯದ ಮೇರು ಎಂದರೆ ಅದು ಬಾಹುಬಲಿ ಹಾಗೂ ಅಕ್ಕಮಹಾದೇವಿ ಮಾತ್ರ. ಅಧಿಕಾರದಿಂದ ಗೌರವ ಪಡೆಯಲು ಸಾಧ್ಯವಿಲ್ಲ. ಆದರೆ ತ್ಯಾಗದಿಂದ ಎಲ್ಲಾ ರೀತಿಯ ಗೌರವ ಪಡೆಯಲು ಸಾಧ್ಯ ಎಂಬುದನ್ನು ಈ ಇಬ್ಬರು ಮೇರು ವ್ಯಕ್ತಿಗಳು ತೋರಿಸಿಕೊಟ್ಟಿದ್ದಾರೆ ಎಂದರು.
ಆತ್ಮ ಬಲ ಹೆಚ್ಚಿಸಿಕೊಳ್ಳಲು ಆಧ್ಯಾತ್ಮ ಉತ್ತಮ ಮಾರ್ಗ. ಆತ್ಮಬಲವನ್ನು ಹೆಚ್ಚಿಸಿಕೊಂಡು ಸಮಾಜವನ್ನು ಮರೆತರೆ ಸಮಾಜ ಹಾಳಾಗುತ್ತದೆ. ಆಧ್ಯಾತ್ಮದಿಂದ ಪಡೆದ ಆತ್ಮ ಬಲವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಹೇಳಿದರು.
ಮುನಿಶ್ರೀ ಮೋಹಜಿತ್ ಕುಮಾರ್ ಜೀ ತಮ್ಮ ೧೭ನೇ ವರ್ಷಕ್ಕೆ ಸಂಯಮ ಜೀವನಕ್ಕೆ ಬಂದು ಇಂದು ೫೦ ವರ್ಷ ಸನ್ಯಾಸ ಜೀವನ ನಡೆಸಿದ್ದಾರೆ. ಈ ಅವಧಿಯಲ್ಲಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲು ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ನಶಮುಕ್ತ ಸಮಾಜ ನಿರ್ಮಾಣಕ್ಕಾಗಿ ಅತಿ ಹೆಚ್ಚು ಶ್ರಮಪಟ್ಟಿದ್ದಾರೆ. ಇಂಥ ಗುರುಗಳ ಮಾರ್ಗದರ್ಶನ ಇನ್ನೂ ನೂರಾರು ವರ್ಷಗಳ ಕಾಲ ಜನರಿಗೆ ಸಿಗುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುನಿಶ್ರೀ ಭವ್ಯ ಕುಮಾರ್ ಜೀ, ಮುನಿಶ್ರೀ ಜಯೇಶ್ ಕುಮಾರ್ ಜೀ, ಶಾಸಕ ಎಚ್.ಡಿ. ತಮ್ಮಯ್ಯ, ತೇರಪಂಥ್ ಮಹಾಸಭಾ ಅಧ್ಯಕ್ಷ ಮಹೇಂದ್ರ ಡೋಸಿ ಮತ್ತಿತರರಿದ್ದರು.