

ಕಲಬುರಗಿ: ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಕೇಳುವ ನೈತಿಕತೆ ಇಲ್ಲ ಎಂದು ಅಲ್ಪಸಂಖ್ಯಾತರ ಹಿಂದುಳಿದ ದಲಿತರ ಒಕ್ಕೂಟದ ಜಿ¯್ಲÁಧ್ಯP್ಷÀ ಜಿ.ಎಂ.ಕೊರಬು ಹೇಳಿದರು. ಹಿಂದುಳಿದ ವರ್ಗಗಳಿಗೆ ಮೀಸಲು ನೀಡುವುದು ವಿರೋಧಿಸಿದವರ ಪರ ಬಿಜೆಪಿ ಹಿರಿಯ ನಾಯಕ ರಾಮಜೋಯಿಸ್ ವಕಾಲತ್ತು ವಹಿಸಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿರೋಧಿಸಿದ ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಮತ ಕೇಳುವ ನೈತಿಕ ಹಕ್ಕು ಇಲ್ಲ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಏರುವ ಬಿಜೆಪಿಯೂ ಹಿಂದುಳಿದವರಿಗೆ ಅನ್ಯಾಯ ಮಾಡುತ್ತಿದೆ. ಧರ್ಮ ಸಂಘರ್ಷವನ್ನು ಜೀವಂತವಿಟ್ಟು ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿದೆ. ಕೋಲಿ, ಕುರುಬ ಸಮಾಜವನ್ನು ಎಸ್‌ಟಿ ಸೇರಿಸುವ ಭರವಸೆ ನೀಡಿದ್ದರೂ. ಇದುವರೆಗೆ ಮಾಡಿಲ್ಲ. ಹಿಂದುಳಿದ ವರ್ಗದ ಕೆ.ಎಸ್.ಈಶ್ವರಪ್ಪನವರಿಗೆ ಎರಡು ಟಿಕೆಟ್ ನೀಡದೆ ಅನ್ಯಾಯ ಮಾಡಲಾಯಿತು. ಇದೀಗ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಆರ್‌ಎಸ್‌ಎಸ್ ಹಿಡಿತದಲ್ಲಿರುವ ಬಿಜೆಪಿಯಿಂದ ಹಿಂದುಳಿದವರ ಅಭಿವೃದ್ಧಿ ಅಸಾಧ್ಯ ಎಂದರು. ಗುರುಶಾಂತಯ್ಯ, ದುಂಡಪ್ಪ, ಖಾಜಪ್ಪ ಇತರರಿದ್ದರು.