ಅಹಲ್ಯಾಬಾಯಿ ಜ್ಯೋತಿ ರಥಯಾತ್ರೆ 24ರಿಂದ

oppo_2
oppo_2
Published on

ಕಲಬುರಗಿ: ಲೋಕಮಾತೆ ರಾಣಿ ಅಹಲ್ಯಾಬಾಯಿ ಅವರ ೩೦೦ನೇ ಜಯಂತಿ ನಿಮಿತ್ತ ದೇಶಾದ್ಯಂತ ಜ್ಯೋತಿರಥಯಾತ್ರೆ ಹಮ್ಮಿಕೊಂಡಿದ್ದು, ಮಾ.೨೪ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ಅಖಿಲ ವಿಶ್ವಪಾಲ ಕ್ಷತ್ರೀಯ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಎಂ.ಪಿ.ತಿಳಿಸಿದರು.

ಮಾ.೨೪ರAದು ರಾಮೇಶ್ವರಂನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ಧರಾಮನಂದಾಪುರ ಸ್ವಾಮೀಜಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹರಿದ್ವಾರದ ಅಹಲ್ಯಾಬಾಯಿ ಹೋಳ್ಕರ್ ಮಹಾಶಕ್ತಿ ಪೀಠಧ ಪೀಠಾಧಿಪತಿ ಶ್ರೀ ವಿಜಯಸಿಂಗ್‌ಪಾಲ್ ಭಾಗವಹಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೨೪ರಂದೇ ರಾಜ್ಯವನ್ನು ರಥ ಪ್ರವೇಶಿಸಲಿದ್ದು, ಗೋವಾ, ಬೆಳಗಾವಿ ಮಾರ್ಗದ ಮೂಲಕ ಮಹಾರಾಷ್ಟçಕ್ಕೆ ತಲುಪಲಿದೆ. ಏ.೨ರಿಂದ ೧೨ರವರೆಗೆ ಕರ್ನಾಟಕದಲ್ಲಿ ಜ್ಯೋತಿ ರಥಯಾತ್ರೆ ಸಂಚರಿಸಲಿದೆ. ಏ.೪ರಂದು ಕಲಬುರಗಿಗೆ ಜ್ಯೋತಿ ರಥಯಾತ್ರೆ ಆಗಮಿಸಲಿದ್ದು, ಅದ್ದೂರಿಯಾಗಿ ಸ್ವಾಗತಿಸಲಾಗುವುದು. ರಾಜ್ಯದೆಲ್ಲೆಡೆ ರಾಣಿ ಅಹಲ್ಯಾಬಾಯಿ ಅವರ ಅಭಿಮಾನಿಗಳು, ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಮಾಹಿತಿಗೆ ೮೯೭೧೭೦ ೩೧೭೬ ಸಂಪರ್ಕಿಸಬೇಕು ಎಂದರು.

ಪ್ರಮುಖರಾದ ರೇವಣಸಿದ್ದಪ್ಪ ಅಣಕಲ್, ಹನುಮಂತ ಪೂಜಾರಿ, ವಿಜಯಲಕ್ಷ್ಮಿ ಮುಗುಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net