

ಚಿತ್ರದುರ್ಗ: ತುಳಿತಕ್ಕೆ ಒಳಗಾದ,ಮೌಢ್ಯ ಕಂದಾಚಾರಗಳಿಂದ ಜಡ್ಡುಗಟ್ಟಿದ್ದ ಸಮಾಜದ ಜಾಗೃತಿ ನಿಟ್ಟಿನಲ್ಲಿ ಬಸವಾದಿ ಶರಣರ ಕಾರ‌್ಯ ಶ್ಲಾಘನೀಯ ವೆಂದು ನಿವೃತ್ತ ಪ್ರಾಚಾರ್ಯ ಜಿ.ಎಸ್.ಕೆಂಚಪ್ಪ ಹೇಳಿದರು. ತಾಲೂಕಿನ ನರೇನಾಳ್‌ನಲ್ಲಿ ಮುರುಘಾ ಮಠದಿಂದ ಮಂಗಳವಾರ ಏರ್ಪ ಡಿಸಿದ್ದ ಅನುಭಾವ ಶ್ರಾವಣ ಕಾರ್ಯಕ್ರಮದಲ್ಲಿ ದೇವನೂರು ಗುರುಮಲ್ಲೇಶ್ವರ ಕುರಿತು ಉಪನ್ಯಾಸ ನೀಡಿದ ಅವರು, ಶರಣರಿಗೆ ಲಿಂಗ, ಜಾತಿ,ಪಂಥ ಭೇದವಿಲ್ಲ. ಸತ್ಯ ಶುದ್ಧ ಕಾಯಕ,ಇಷ್ಟಲಿಂಗ ಪೂಜೆ ನಡೆಸುತ್ತಿದ್ದ ಮಲ್ಲೇಶ್ವರರು ಪವಾಡ ಪುರುಷರಂತೆ ಭಕ್ತರಿಗೆ ಕಂಡಿದ್ದರೆಂದ ರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ,ಅರಿತರೇ ಅದೇ ಸ್ವರ್ಗ,ಮರೆತರೆ ನರಕ. ನಮಗೆ ಅರಿವಿಲ್ಲದೆಯೇ ನಮ್ಮಲ್ಲಿ ಅಹಂಕಾರ, ಅಜ್ಞಾನ, ಮತ್ತೊಬ್ಬರನ್ನು ನೋಯಿಸುವ ಕಾರ್ಯಗಳು ನಡೆದು ಬಿಡುತ್ತವೆ ಎಂದು ಎಚ್ಚರಿಸಿದರು.
ಬಿ.ಸೋಮಪ್ಪ,ಚಂದ್ರಶೇಖರ್,ವಿ.ಮಲ್ಲಿಕಾರ್ಜುನ,ಡಿ.ಎಂ.ಶಿವಕುಮಾರ್,ವಾಸುದೇವರೆಡ್ಡಿ,ಲಕ್ಕೇಗೌಡ, ಎಸ್.ಟಿ.ಪ್ರಸನ್ನ,ಬಸವರಾ ಜಕಟ್ಟಿ ಮತ್ತಿತರರು ಇದ್ದರು.ಜಮುರಾ ಕಲಾವಿದರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಮಲ್ಲಿಕಾರ್ಜುನ ನಿರೂಪಿಸಿದರು.