ಅಸ್ಪೃಶ್ಯತೆಗೆ ನಾಯಕ ಸಮುದಾಯದ ವಿರೋಧವಿದೆ

Pressmeet
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5935717, 0.53410715);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
Published on

ಚಿತ್ರದುರ್ಗ: ಜಿಲ್ಲೆಯ ಯಾವ ಭಾಗದಲ್ಲಾಗಲಿ ಅಸ್ಪೃಶ್ಯತೆ ಆಚರಣೆಯನ್ನು ನಾಯಕ ಸಮುದಾಯವೂ ವಿರೋಧಿಸಲಿದೆ ಎಂದು ಸಮುದಾಯದ ಮುಖಂಡ ಮಹಂತೇಶ್ ನಾಯಕ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯಲ್ಲಿ ಎಸ್ಸಿ ಸಮುದಾಯದವರಿಗೆ ಕ್ಷೌರ ಮಾಡಲು ಯಾರ ಅಭ್ಯಂತರವೂ ಇಲ್ಲ ಎಂದರು.

ಯಾರಿಂದಲೋ ಇಲ್ಲಿ ನಡೆದ ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಲಿ. ಆದರೆ, ಇಡೀ ನಾಯಕ ಸಮುದಾಯವನ್ನೇ ಗುರಿ ಪಡಿಸುವುದು ಸರಿಯಲ್ಲ. ಸಹೋದರ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ. ಜಿಲ್ಲಾಡಳಿತದಿಂದ ಈಚೆಗೆ ಶಾಂತಿ ಸಭೆಯೂ ನಡೆದಿದೆ. ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದರು.

ಘಟನೆ ಕುರಿತ ಆಡಿಯೋ ಸಂಭಾಷಣೆ ಗಮನಿಸಿದ್ದೇನೆ. ಇದರಿಂದಲೇ ಗೊಂದಲಕ್ಕೆ ಕಾರಣವಾಗಿದೆ. ಸಮಾನತೆ ವಿಚಾರದಲ್ಲಿ ಗ್ರಾಮದ ನಾಯಕ ಸಮುದಾಯದ ಸಹಮತವಿದೆ. ಆದರೆ, ಇದಕ್ಕೆ ವಿರುದ್ಧವಿದ್ದೇವೆ ಎಂಬುದು ಸತ್ಯಕ್ಕೆ ದೂರ ಎಂದರು.

ಶ್ರೀನಿವಾಸ್, ತಿಪ್ಪೇಸ್ವಾಮಿ, ರಾಮಣ್ಣ, ಗಾದ್ರಿ ಪಾಲಯ್ಯ, ಹೇಮಣ್ಣ, ಪಾಲಯ್ಯ, ರಂಗಸ್ವಾಮಿ, ಗಾದ್ರಿ ಪಾಲಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net