

ಚಿತ್ರದುರ್ಗ:ನಗರದ ಜೈಲುರಸ್ತೆ ಪಾಳು ಬಿದ್ದ ಮನೆಯೊಂದರಲ್ಲಿ ಆಗಿರುವ ಐವರ ನಿಗೂಢ ಸಾವಿನ ಸುದ್ದಿಯಿಂದ ಕೋಟೆ ನಗರಿ ಬೆ ಚ್ಚಿ ಬಿದ್ದಿದೆ.
ಮಾಹಿತಿ ಆಧರಿಸಿ ಗುರುವಾರ ರಾತ್ರಿ ಮನೆ ಪರಿಶೀಲಿಸಿದ ಪೊಲೀಸರು ಶಾಕ್ ಆಗಿದ್ದಾರೆ. ಮೊದಲಿಗೆ ಮೂರು ನಂತರದಲ್ಲಿ ಇಬ್ಬರ ಅ ಸ್ಥಿ ಪಂಜರಗಳು ದೊರೆತಿದ್ದು,ಕಳೆದ ಮೂರ‌್ನಾಲ್ಕು ವರ್ಷಗಳಿಂದ ಮುಚ್ಚಿದ್ದ ಮನೆಯಲ್ಲಿ ಆಗಿರುವ ಈ ಸಾವುಗಳ ರಹಸ್ಯ ಭೇದಿಸುವ ಸವಾ ಲು ಈಗ ಪೊಲೀಸರ ಮುಂದಿದೆ.
ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿ ಮೂಲದ ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಅವರ ಪತ್ನಿ ಪ್ರೇಮ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರರೆಡ್ಡಿ, ಪುತ್ರಿ ತ್ರಿವೇಣಿ ಅವರು ಅಸು ನೀಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನಗರದಲ್ಲಿ ಬೇರೆಡೆ ವಾಸವಿರುವ ಪವನ್‌ಕುಮಾರ್ ಎಂಬುವರು ದೂರು ನೀಡಿದ್ದಾರೆ.
ಎಸ್‌ಪಿಗೆ ಬಂದಿತ್ತು ಮಾಹಿತಿ
ಲಭ್ಯಮಾಹಿತಿ ಆಧರಿಸಿ ಎಸ್‌ಪಿ ಧರ್ಮೆಂದರ್‌ಕುಮಾರ್ ಅವರ ಸೂಚನೆಯಂತೆ ಪೊಲೀಸರು ಗುರುವಾರ ರಾತ್ರಿ ಮನೆ ಪರಿಶೀಲಿಸಿ ದ್ದಾರೆ. ಯಾವಾಗ ಬುರುಡೆ, ಅಸ್ಥಿಪಂಜರ ದೊರೆಯಿತು ಕೂಡಲೇ ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಿಗೆ ಬುಲಾ ವ್ ಹೋಗಿದ್ದು, ಸ್ಥಳಕ್ಕೆ ಆಗಮಿಸಿದ ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಅಲ್ಲಿ ದೊರೆತಿರುವ ಮೃತರ ಅವಶೇಷ ಕಂಡು ಬೆಚ್ಚಿ ಬಿದ್ದಿದ್ದಾರೆ.
ಪ್ರತ್ಯೇಕ ಬೆಳಕಿನ ವ್ಯವಸ್ಥೆ ನಂತರ ಚುರುಕಾದ ಪರಿಶೀಲನೆ
ಸಂಪೂರ್ಣ ಕತ್ತಲಿದ್ದ ಮನೆಯಲ್ಲಿ ಪ್ರತ್ಯೇಕ ಬೆಳಕಿನ ವ್ಯವಸ್ಥೆ ಮಾಡಿಕೊಂಡ ನಂತರದಲ್ಲಿ ಶುಕ್ರವಾರ ಬೆಳಗಿನ ಜಾವದವರೆಗೂ ಪರಿಶೀ ಲನೆ ನಡೆಸಿ, ಅಸ್ಥಿಪಂಜರಗಳನ್ನು ದಾವಣಗೆರೆ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಎಸ್‌ಪಿ ಧರ್ಮೆಂದರ್‌ಕುಮಾರ್ ಮತ್ತಿತರ ಹಿರಿಯ ಅ ಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ದೊರೆತ ಮಾಹಿತಿ
ಪಾಳು ಬಿದ್ದ ಈ ಮನೆಗೆ ಯಾರೋ ಹೋಗಿದ್ದ ಸಂದರ್ಭದಲ್ಲಿ, ಅಲ್ಲಿದ್ದ ಬುರುಡೆ ನೋಡಿದ್ದಾರೆ. ನಂತರದಲ್ಲಿ ಬಾಯಿಂದ,ಬಾಯಿಗೆ ಹರಡಿದ ವಿಷಯದಿಂದಾಗಿ ಪೊಲೀಸರಿಗೆ ಮಾಹಿತಿ ರವಾನೆ ಆಗಿದೆ.
ಯಾರೊಂದಿಗೂ ಸಂಪರ್ಕವಿರಲಿಲ್ಲ?
ಸ್ಥಳೀಯರ ಪ್ರಕಾರ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಈ ಮನೆಯವರು, ನೆರೆ ಹೊರೆಯವರು ಅಥವಾ ಸಂಬಂಧಿಕರ ಜತೆ ಸಂಪ ರ್ಕ ಹೊಂದಿರಲಿಲ್ಲವಂತೆ. ಈ ಸಾವಿಗೆ ನೈಜ ಕಾರಣವೇನು? ಸಾವು ಯಾವಾಗ ಸಂಭವಿಸಿತು? ಇತ್ಯಾದಿ ಪ್ರಶ್ನೆಗಳಿಗೆ ಫೋರೆನ್ಸಿಕ್ ಟೆಕ್ನಿಷಿಯ ನ್ ಹಾಗೂ ತನಿಖಾಧಿಕಾರಿಗಳಿಂದ ಉತ್ತರ ಸಿಗಬೇಕಿದೆ.
ದೂರು ದಾಖಲು
ಪವನ್‌ಕುಮಾರ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಬಡಾವಣೆ ಠಾಣೆ ಪಿಐ ನಯೀಂ ಅಹಮದ್ ಅವ ರು ತನಿಖೆ ಮುಂದುವರಿಸಿದ್ದಾರೆ.