ಅಸ್ಥಿಪಂಜರ ಪ್ರಕರಣ ಎಫ್‌ಎಸ್‌ಎಲ್‌ಗೆ ಸ್ಯಾಂಪಲ್

House
Published on

ಚಿತ್ರದುರ್ಗ: ನಗರದಲ್ಲಿ ಐವರ ಅಸ್ಥಿಪಂಜರಗಳು ಪತ್ತೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಲಾಗಿದ್ದು, ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಜ. 8ರಂದು ಒಂದಿಷ್ಟು ಮಾದರಿಗಳು ರವಾನೆಯಾಗುತ್ತಿವೆ.

ಪಾಳು ಬಿದ್ದ ಮನೆಯಲ್ಲಿ ಪತ್ತೆಯಾದ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರರೆಡ್ಡಿ ಈ ಐವರ ತಲೆ ಬುರುಡೆ, ಮೂಳೆ, ಹಲ್ಲುಗಳು, ಕೂದಲು, ಬಟ್ಟೆ ಸೇರಿ ಇನ್ನಿತರೆ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net