ಅಸಹ್ಯ ಪಡುವ ರೀತಿಯಲ್ಲಿ ರಾಜ್ಯ ರಾಜಕಾರಣ

4879b118-95e4-439c-a52e-06a302fb315a
Published on

ಬಾಗಲಕೋಟೆ: ರಾಜ್ಯ ರಾಜಕಾರಣ ಅಸಹ್ಯ ಪಡುವ ರೀತಿಗೆ ತಲುಪಿದೆ. ಇದು ಬರೀ ಒಂದು ಪಕ್ಷದ್ದಲ್ಲ. ಮೂರು ಪಕ್ಷಗಳಲ್ಲಿ ಇದೇ ಸ್ಥಿತಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ಹೊರಹಾಕಿದರು.

ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಎಲ್ಲ ಪಕ್ಷಗಳಲ್ಲೂ ನೇರವಾಗಿ ಗುಂಪುಗಾರಿಕೆ ಕಾಣಿಸುತ್ತಿದೆ. ಈ ತರಹದ ಬಹಿರಂಗ ಬಡಿದಾಟವನ್ನು ಹಿಂದೆAದೂ ರಾಜ್ಯದ ಜನರು ಕಂಡಿರಲಿಲ್ಲ ಎಂದರು.

ಇಷ್ಟೊ0ದು ಬಡಿದಾಡಿಕೊಂಡರೂ ಕಾಂಗ್ರೆಸ್‌ನವರು ಚುನಾವಣೆಯಲ್ಲಿ ನಾವೆಲ್ಲ ಮತ್ತೆ ಒಂದಾಗುತ್ತೇವೆ. ಲೋಕಸಭೆ, ಉಪಚುನಾವಣೆಯಲ್ಲಿ ಗೆದ್ದಲ್ವಾ ಎಂದು ಕೇಳುತ್ತಾರೆ. ಇನ್ನು ಬಿಜೆಪಿಯವರು ಈ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದೆ. ಮುಡಾ, ಸರದಿ ಕೊಲೆಗಳು, ದರ ಏರಿಕೆಯಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಽಕಾರಕ್ಕೆ ಬರಲ್ಲ ಎನ್ನುತ್ತಾರೆ. ಜೆಡಿಎಸ್‌ನಲ್ಲಿ ಜಿ.ಟಿ.ದೇವೇಗೌಡ, ಕುಮಾರಸ್ವಾಮಿ ಅವರದ್ದು ಇದ್ದು, ಇದೆಲ್ಲ ನಮ್ಮಲ್ಲಿ ಮಾಮೂಲಿಯಾಗಿ ನಡೆಯುತ್ತದೆ ಎಂದು ಹೇಳುತ್ತಾರೆ. ಎಲ್ಲರೂ ಅಽಕಾರಕ್ಕಾಗಿ ಕಿತ್ತಾಟ ನಡೆಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಸ್ವತಃ ಸಿಎಂ ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ ಎನ್ನುತ್ತಾರೆ. ಅಽಕಾರ ಹಂಚಿಕೆ ಆಗಿದೆ ಎಂದು ಡಿಕೆಶಿ ಬಣದವರು ಹೇಳುತ್ತಾರೆ. ಯಾವುದೇ ಹಂಚಿಕೆ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಈ ರೀತಿ ಕಾಂಗ್ರೆಸ್ ಪಕ್ಷದಲ್ಲಿ ವಿಚಿತ್ರ ಹೇಳಿಕೆಗಳು ಬರುತ್ತಿವೆ. ಹೀಗಾಗಿ ಈ ಸರ್ಕಾರ ಎಷ್ಟು ದಿನ ಇರುತ್ತದೆಯೋ ಇರುವುದಿಲ್ಲವೋ ಗೊತ್ತಿಲ್ಲ ಎಂದರು.

ಇನ್ನು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಬಣ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಮ್ಮ ರಾಜ್ಯದ ರಾಜಕಾರಣದ ಇತಿಹಾಸದಲ್ಲಿ ಇಷ್ಟು ಕೆಟ್ಟ ರಾಜಕಾರಣ ನಡೆದಿರಲಿಲ್ಲ. ಇವರಿಗೆ ಜನರ ಭಯ ಇಲ್ಲ, ಪಕ್ಷದ ಕಾರ್ಯಕರ್ತರ ನೋವಿನ ಕಡೆಗೆ ಗಮನ ಕೊಡುವುದಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಕಾರ್ಯಕರ್ತರು ಶ್ರಮ ಪಡಬೇಕು. ಆದರೆ, ಇವತ್ತು ಅವರು ನೋವು ಯಾರೂ ಕೇಳುತ್ತಿಲ್ಲ ಎನ್ನುವುದು ದುರಾದೃಷ್ಟ. ಯಾರ ಮೇಲೆ ಯಾರ ಹೈಕಮಾಂಡ್ ಇದೆ, ಯಾರ ಕಂಟ್ರೋಲ್ ತಪ್ಪಿದೆ ಎನ್ನುವ ವಿವರಕ್ಕೆ ನಾನು ಹೋಗಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net