

ಚಿಕ್ಕಮಗಳೂರು: ಅನ್ನದಾನ ಜಗತ್ತಿನಲ್ಲೇ ಶ್ರೇಷ್ಟದಾನ. ವೃದ್ಧರು, ಅಸಹಾಯಕರು ಹಾಗೂ ವಿಕಲಚೇತನ ಮಕ್ಕಳಿಗೆ ಭೋಜದ ವ್ಯವಸ್ಥೆ ಕಲ್ಪಿಸುವ ಮೂಲಕ ಆಟೋ ಚಾಲಕರು ಮಹತ್ತರ ಕಾರ್ಯ ಮಾಡಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ತಿಳಿಸಿದರು.
ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ೬೯ನೇ ಕನ್ನಡ ರಾಜ್ಯೋತ್ಸವ ಆಚರಣೆ ಸಂಬAಧ ಶನಿವಾರ ಆದಿಶಕ್ತಿನಗರ ಸಮೀಪದ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದ ಭೋಜನದ ವ್ಯವಸ್ಥೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ವೃದ್ಧಾಪ್ಯದ ಬದುಕು ಸಾಗಿಸುತ್ತಿರುವ ಹಿರಿಯ ಜೀವಗಳಿಗೆ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಿರುವುದು ಉತ್ತಮವಾದುದು. ಮನೆಯ ಪಾಲಕರಂತೆಯೇ ವೃದ್ಧಾಶ್ರಮದ ವೃದ್ಧರಿಗೆ ಸ್ಪಂದಿಸುವ ಗುಣ ಸಾರ್ವಜನಿಕರು ಮೈಗೂಡಿಸಿಕೊಂಡಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಸಮಾಜಮುಖಿ ಕಾರ್ಯದಲ್ಲಿ ಹಲವು ಸಂಘ-ಸAಸ್ಥೆಗಳು, ದಾನಿಗಳು ವೃದ್ಧಾಶ್ರಮ ಸೇರಿದಂತೆ ಅಶಕ್ತರಿಗೆ ಸಹಾಯಹಸ್ತ ಚಾಚಿ ಮುನ್ನೆಡೆದರೆ ಮಾತ್ರ ಯಶಸ್ವಿ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು. ಹೀಗಾಗಿ ದುಡಿಮೆಯ ಇಂತಿಷ್ಟು ಹಣವನ್ನು ಅಸಹಾಯಕರಿಗೆ ವ್ಯಯಿಸುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಆಟೋ ಚಾಲಕರ ಸಂಘದ ನಗರ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ದಿನನಿತ್ಯ ಕೂಲಿ ಕಾರ್ಮಿಕರಾಗಿ ದುಡಿಯುವ ಆಟೋ ಚಾಲಕರ ಸಹಕಾರದಿಂದ ಪ್ರತಿ ವರ್ಷ ರಾಜ್ಯೋತ್ಸವದಂದು ಅಂಧ ಮಕ್ಕಳ ಶಾಲೆ, ವೃದ್ಧಾಶ್ರಮಗಳಿಗೆ ಭೋಜದ ವ್ಯವಸ್ಥೆ ಕಲ್ಪಿಸಿ ಸಹಕರಿಸಲಾಗುತ್ತಿದೆ ಎಂದು ಹೇಳಿದರು.
ಆಟೋ ವೃತ್ತಿಯಲ್ಲಿ ವಿದ್ಯಾವಂತರು, ಅವಿದ್ಯಾವಂತರು ಸೇರಿದಂತೆ ಎಲ್ಲ ವರ್ಗದವರು ಬದುಕು ಕಟ್ಟಿಕೊಂಡಿದ್ದಾರೆ. ಚಾಲಕರಲ್ಲಿ ಸೇವೆ ಹಾಗೂ ದುಡಿಮೆ ಮನೋಭಾವದ ತತ್ವ ಒಳಗೊಂಡಿದೆ. ದುಡಿಮೆ ಕುಟುಂಬವನ್ನು ಸುಧಾರಿಸಿದರೆ, ಸೇವೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುನ್ನೆಡೆಯುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಅಂಧಮಕ್ಕಳಶಾಲೆ, ಅನ್ನಪೂರ್ಣವೃಧ್ದಾಶ್ರಮ ಹಾಗೂ ಜೀವನ ಸಂಧ್ಯಾ ಮೂರು ಕಡೆ ಗಳಲ್ಲಿ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಆಟೋ ಸಂಘದ ನಿರ್ದೇಶಕ ಈಶ್ವರ್, ಚಾಲಕರಾದ ವಿಜಯ್, ರಮೇಶ್, ಪೂರ್ಣೇಶ್, ಸಂದೀಪ್, ಸುನೀಲ್, ನವೀನ್, ದಯಾನಂದ್, ಚೇತನ್ ಮತ್ತಿತರರಿರು.