ಅಸಹಾಯಕರಿಗೆ ನೆರವು ಎಲ್ಲರ ಜವಾಬ್ದಾರಿ - ಭೀಮಶಿ ಭರಮಣ್ಣವರ

252515
Published on

ಬೆಳಗಾವಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ತಾಲೂಕಿನ ಸುಳೇಬಾವಿ ಗ್ರಾಮದ ಕಡುಬಡವರಿಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದಿಂದ ಭಾನುವಾರ ದಿನಸಿ ಕಿಟ್ ವಿತರಿಸಲಾಯಿತು.

ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗೋಕಾಕ ನಗರ ಬಿಜೆಪಿ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಅವರು ದಿನಸಿ ಕಿಟ್ ವಿತರಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಅಂಥವರಿಗೆ ನೆರವು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಈಗಾಗಲೇ ಗೋಕಾಕ ನಗರ ಹಾಗೂ ತಾಲೂಕು ಪ್ರದೇಶಗಳಲ್ಲಿರುವ ಕಡುಬಡವರನ್ನು ಗುರುತಿಸಿ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಈವರೆಗೆ 300ಕ್ಕೂ ಹೆಚ್ಚು ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ ಎಂದರು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಕಮಿಟಿ ಚೇರ್ಮನ್ ದೇವಣ್ಣ ಬಿ., ನಾರಾಯಣ ಮಿರಜಕರ, ಶಿವು ಹಿರೇಮಠ, ಮುತ್ತು ಜಮಖಂಡಿ, ಅಡಿವೇಶ ಮಜ್ಜಗಿ, ಸಚಿನ ಮಂಡು, ಮಾರುತಿ ರಾವಳಗೌಡ್ರ, ಶಂಕರ ಜಾಲಿಕಟ್ಟಿ, ಅರ್ಜುನ ಪೂಜೇರಿ, ಸಿದ್ದು ಪೂಜೇರಿ, ಸದೆಪ್ಪ ಪೂಜೇರಿ, ಮಹಾಂತೇಶ ಕೋಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net