ಅಸಹಜವಾಗಿ ನಡೆಸಿಕೊಂಡಲ್ಲಿ ಕ್ರಮ ಕೈಗೊಳ್ಳಿ

Kadugolla
Published on

ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯುಳ್ಳ ಕಾಡುಗೊಲ್ಲರ ಹಟ್ಟಿಗಳಲ್ಲಿ ಸ್ತ್ರೀಯರನ್ನು ಅಸಹಜವಾಗಿ ನಡೆಸಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಣೆ ಟ್ರಸ್ಟ್ ಹಾಗೂ ಕಾಡುಗೊಲ್ಲ ಮಹಿಳಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮಂಗಳವಾರ ಮನವಿ ಸಲ್ಲಿಸಿದರು.

ಸಹಜ ಜೈವಿಕ ಕ್ರಿಯೆಗಳಾದ ಮಾಸಿಕ ಋತುಚಕ್ರ, ಹೆರಿಗೆ ಸಂದರ್ಭಗಳಲ್ಲಿ ಸ್ತ್ರೀಯರನ್ನು ಅಸುರಕ್ಷಿತವಾದ ಬಯಲು ಪ್ರದೇಶಗಳಲ್ಲಿ ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸಿಕೊಳ್ಳಲು ಕನಿಷ್ಟ ಸೌಲಭ್ಯ ಒದಗಿಸದೆ, ಹಲವು ದಿನ ಹಟ್ಟಿಯಿಂದ ಹೊರಗಿಡುವುದು ಈಗಲೂ ಮುಂದುವರಿದಿದೆ. ಸೂಕ್ತ ರಕ್ಷಣೆಯೂ ಸಿಗುವುದಿಲ್ಲ ಎಂದು ಅಳಲು ತೋಡಿಕೊಂಡಿರು.

ಅನಿಷ್ಟ ಪದ್ಧತಿಗಳಿಂದಾಗಿ ಸಮುದಾಯದ ಮಹಿಳೆಯರ ಅಸಹಜ ಸಾವು ಸಂಭವಿಸುತ್ತಿವೆ. ಗರ್ಭಪಾತಕ್ಕೂ ಒಳಗಾಗುತ್ತಿದ್ದಾರೆ. ಗರ್ಭಕೋಶ ತೆಗೆಸಿಕೊಳ್ಳುವ ಒತ್ತಡಗಳೂ ಹೆಚ್ಚುತ್ತಿವೆ. ಮೌಢ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ದೂರಿದರು.

ಬಲವಂತ, ವಿರೋಧಿಸದ, ಅಸಹಾಯಕ, ಆತಂಕದಲ್ಲೇ ಹಟ್ಟಿಗಳಲ್ಲಿ ಬದುಕುವ ಸ್ಥಿತಿ ಮಹಿಳೆಯರಿಗೆ ಉಂಟಾಗಿದೆ. ಅವರೆಲ್ಲ ಶಿಕ್ಷಣ, ಉದ್ಯೋಗ, ಆರೋಗ್ಯ ಇನ್ನಿತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಕ್ರಮವಹಿಸಿ, ಅವ್ಯವಸ್ಥೆ ಸರಿಪಡಿಸಬೇಕು ಎಂದು ಕೋರಿದರು.

ಮುಖಂಡರಾದ ಶಿವುಯಾದವ್, ಡಾ.ಜಿ.ಕೆ. ಪ್ರೇಮಾ, ರಾಮಣ್ಣ, ಬಿ.ಎ. ಸುನಂದಾ, ಬಿ. ನಂದಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net