ಅಸಮರ್ಥ ಗೃಹ ಸಚಿವ ರಾಜೀನಾಮೆ ನೀಡಲಿ

Dr.Sudha Halakai
Published on

ಕಲಬುರಗಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಜನರು ಭೀತಿಯ ಮಧ್ಯೆ ಜೀವಿಸುವಂತಾಗಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮಾಧ್ಯಮ ಪೆನಾಲಿಸ್ಟ್ ಡಾ.ಸುಧಾ ಹಾಲಕಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ನಿಯಂತ್ರಣ ತಪ್ಪಿರುವುದಕ್ಕೆ ಈ ಘಟನೆಗಳೇ ಸಾಕ್ಷಿ. ಗೃಹ ಸಚಿವರು ಕೈಚೆಲ್ಲಿ ಕುಳಿತ್ತಿದ್ದು, ಪ್ರತಿ ಘಟನೆಯಲ್ಲೂ ರಾಜಕೀಯ, ಮತ ಬ್ಯಾಂಕ್ ಯೋಚಿಸಿ, ಕ್ಷುಲಕ್ಕೆ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆಯ ಕರ್ನಾಟಕ ಗುಂಡಾ ರಾಜ್ಯವಾಗುತ್ತಿದೆ. ಸಿಟಿ ಕ್ರೆÊಂ ಬ್ಯುರೋ ಮತ್ತು ನ್ಯಾಷನಲ್ ಕ್ರೆÊಂ ಬ್ಯುರೋ ಪ್ರಕಾರ ೧೧ ತಿಂಗಳಲ್ಲಿ ಶೇ.೬೦ಕ್ಕಿಂತ ಹೆಚ್ಚು ಅಪರಾಧ ಚಟುವಟಿಕೆ ಜಾಸ್ತಿ ಆಗಿವೆ. ಮಹಿಳೆಯರ ಮೇಲಿನ ಅಮಾನುಷ ಕೃತ್ಯ ಜಾಸ್ತಿಯಾಗಿವೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಅಸಮರ್ಥ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net