

ಯಾದಗಿರಿ: ಕೆಪಿಟಿಸಿಎಲ್ ಅಕಾರಿಗಳು ಕೆಡಿಪಿ ಸಭೆಗೆ ಹಾಜರಾಗದೆ ಅಸಡ್ಡೆತನ ಪ್ರದರ್ಶಿಸುತ್ತಿರುವುದು ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚೌವ್ಹಾಣ ಗುಡುಗಿದರು.
ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ನಾನು ಕಳೆದ ಮೂರ್ನಾಲ್ಕು ಸಭೆಗಳಲ್ಲಿ ಗಮನಿಸುತ್ತಿದ್ದೇನೆ. ಕೆಪಿಟಿಸಿಎಲ್ ಒಬ್ಬ ಅಕಾರಿ ಸಹ ಹಾಜರಾಗಿಲ್ಲ. ಜಿಲ್ಲೆಯಲ್ಲಿ 16 ವಿದ್ಯುತ್ ಸಬ್ ಸ್ಟೇಷನ್ಗಳಿದ್ದು, ಇದರಲ್ಲಿ ಕೇವಲ 3 ಮತ್ರ ಕಾರ್ಯ ನಿರ್ವಹಿಸುತ್ತಿವೆ. ಏನು ಸಮಸ್ಯೆ ಇದೆ ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡುವವರೇ ಬರಲಿಲ್ಲ ಎಂದರೆ ಯಾರನ್ನು ಕೇಳಬೇಕು? ಎಂದು ಖಾರವಾಗಿ ಪ್ರಶ್ನಿಸಿದರು.
ಕೆಪಿಟಿಸಿಎಲ್ನಲ್ಲಿ ಕೋಟ್ಯಾಂತರ ರೂ.ಅನುದಾನವಿದೆ. ಕೆಲ ಅಕಾರಿಗಳು ಹಣ ಲೂಟಿ ಹೊಡೆಯುತ್ತಿದ್ದಾರೆ. ಸಭೆಗೆ ಗೈರಾದ ಅಕಾರಿಗೆ ನೋಟಿಸ್ ನೀಡಿ, ಅವರ ಅಮಾನತ್ತಿಗೆ ಸರ್ಕಾರಕ್ಕೆಫಾರಸು ಮಾಡುವಂತೆ ಜಿಲ್ಲಾಕಾರಿಗೆ ಸೂಚಿಸಿದರು.
ಕಳಪೆ ಹತ್ತಿ ಬೀಜ ಮಾರಾಟವಾದ ಬಗ್ಗೆ ಜಿಲ್ಲೆಯ ರೈತರು ನನಗೆ ಕರೆ ಮಾಡಿ ದೂರು ಸಲ್ಲಿಸುತ್ತಿದ್ದಾರೆ. ಯಾದಗಿರಿ ಮತ್ತು ಶಹಾಪುರ ತಾಲೂಕಿನಲ್ಲಿ ಕಳಪೆ ಬೀಜ ಹೆಚ್ಚು ಮಾರಾಟವಾಗಿದ್ದು, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಕೃಷಿ ಅಕಾರಿ ರಾಜುಗೆ ಪ್ರಶ್ನಿಸಿದರು. ಜಿಲ್ಲಾಕಾರಿ ಸ್ನೇಹಲ್ ಉತ್ತರಿಸಿ, ಶಹಾಪುರದಲ್ಲಿ ಈ ರೀತಿ ಪ್ರಕರಣ ಬೆಳಕಿಗೆ ಬಂದಿದ್ದು, ಬೀಜಗಳನ್ನು ಪರೀಕ್ಷೆಗಾಗಿ ಲ್ಯಾಬ್ಗೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಂಎಲ್ಸಿ ಬಾಬುರಾವ್ ಚಿಂಚನಸೂರ, ಡಾ.ಬಿ.ಜಿ.ಪಾಟೀಲ್, ಅಲೆಮಾರಿ ನಿಗಮದ ಅದ್ಯಕ್ಷ ದೇವೀಂದ್ರನಾಥ ನಾದ್, ಜಿಪಂ ಸಿಇಒ ಅಮರೇಶ ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ ಸಭೆಯಲ್ಲಿದ್ದರು