ಅಸಂವಿಧಾನಿಕ ನಡೆ ಸಲ್ಲ

20SND-01
Published on

ಸಿಂಧನೂರು: ರಾಜ್ಯಸಭೆ ಕಲಾಪದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರ ರಾಜೀನಾಮೆ ಪಡೆಯಲು ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಅಮಿತ್ ಷಾ ಕೇಂದ್ರ ಸರ್ಕಾರದ ಮಂತ್ರಿಯಾಗಿ ಅಂಬೇಡ್ಕರ್ ಕುರಿತು ಮಾತನಾಡಿದ್ದಾರೆ. ಹಾಗಾಗಿ ಇದು ಅಸಂವಿಧಾನಿಕ ನಡೆಯಾಗಿದೆ. ಈ ಹೇಳಿಕೆಯು ಕೋಮುವಾದಿ ಮನಸ್ಥಿತಿಯ ಬಣ್ಣವನ್ನು ಬಹಿರಂಗಪಡಿಸಿದಂತಾಗಿದೆ. ಸಂವಿಧಾನ ಮತ್ತು ಕಾನೂನು ಮುಖಾಂತರ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಮತದಾನದ ಮುಖಾಂತರ ಪ್ರಭುತ್ವ ಪಡೆಯಲು ಸಾಧ್ಯವಾಗಿದ್ದು ಸಂವಿಧಾನವೇ ಕಾರಣವಾಗಿದೆ ಎಂದು ಹೇಳಲಾಯಿತು.

ದೇಶದ ಬಡವರು, ರೈತರು, ಕೂಲಿಕಾರರು, ದಲಿತರು, ಮಹಿಳೆಯರು, ಶೋಷಿತರು ಈ ಸಮಾಜದ ಮುಖ್ಯವಾಹಿನಿಗೆ ಬಂದು ನಿಲ್ಲಲು ಅಂಬೇಡ್ಕರ್ ಕಾರಣ. ಅಂಬೇಡ್ಕರ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ಅಮಿತ್ ಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಪ್ರಮುಖರಾದ ಯಮನಪ್ಪ, ಎಚ್.ಎನ್.ಬಡಿಗೇರ್, ಆರ್.ಅಂಬ್ರೂಸ್, ಎಂ.ಗಂಗಾಧರ್, ಎಚ್ ಜಗದೀಶ್ ವಕೀಲ, ಸುಭಾ?್ ಫ್ರಾಂಕ್ಲಿನ್, ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ಮೌನೇಶ ಜಾಲವಾಡಗಿ, ಮುತ್ತು ಸಾಗರ್, ಹುಸೇನಪ್ಪ ಬಾಲಿ, ಸಬ್ಜಲಿ ಸಾಬ್, ಶಂಕರ್ ವಾಲೇಕಾರ್, ನಾಗರಾಜ ಪೂಜಾರ, ನಾರಾಯಣ ಬೆಳಗುರ್ಕಿ, ಮೌಲಪ್ಪ ಮಾಡಸಿರವಾರ, ವೀರೇಶ ಹಂಚಿನಾಳ, ನಾಗರಾಜ ಸಾಸಲಮರಿ, ಮಹಾಂಕಾಳೆಪ್ಪ ಮಲ್ಲಾಪುರ, ನಿರುಪಾದಿ ಸಾಸಲಮರಿ, ಮಹೇಶ ಸುಕಾಲಪೇಟೆ, ಸುರೇಶ ಕಟ್ಟಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net