ಅಸಂಖ್ಯೆ ಹಿಂದುಗಳ ಕನಸು ನನಸು

A dream come true for countless Hindus
A dream come true for countless Hindus
Published on

ಗುಳೇದಗುಡ್ಡ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ವರ್ಷವಾಗಿದ್ದು, ಅಸಂಖ್ಯೆ ಹಿಂದುಗಳ ಕನಸು ನನಸಾಗಿದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

ಪಟ್ಟಣದ ಕಾಲೇಜು ಸರ್ಕಲ್‌ನಲ್ಲಿ ಬುಧವಾರ ಸಂಜೆ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ವರ್ಷಾಚರಣೆ ಅಂಗವಾಗಿ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ರಾಮಮಂದಿರ ಯಾತ್ರೆ ಮೂಲಕ ಲಾಲ್‌ಕೃಷ್ಣ ಅಡ್ವಾಣಿ ಅವರು ಹೋರಾಟವನ್ನು ಸಂಘಟಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ವಿಶ್ವ ಹಿಂದು ಪರಿಷತ್ ಹೋರಾಟದ ಫಲವಾಗಿ ರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಭವ್ಯ ಸಂಸ್ಕೃತಿ ಪರಿಚಯಿಸುವ ಕಾರ್ಯ ನಡೆಯಬೇಕು ಎಂದರು.

ಕಮಲಕಿಶೋರ ಮಾಲಪಾಣಿ, ರವಿ ಅಂಗಡಿ, ಭೂವನೇಶ ಪೂಜಾರಿ, ಪ್ರಶಾಂತ ಜವಳಿ, ದೀಪಕ ನೇಮದಿ, ಶ್ರೀಕಾಂತ ಭಾವಿ, ಪ್ರಕಾಶ ಕಾವಡೆ, ಶೀತಲ ಸತ್ತೀಗೇರಿ, ಶಿವು ತುಪ್ಪದ, ಪ್ರಭು ಕಳ್ಳಿಗುಡ್ಡ, ತಿಮ್ಮಣ್ಣ ಬಂಡಿವಡ್ಡರ, ಶಿವು ಬಾದವಾಡಗಿ, ಸಂತೋಷ ಭಜಂತ್ರಿ, ರವಿ ಬೀಳಗಿ, ಬಾಳು ನಿರಂಜನ, ಬಸು ಕಳ್ಳಿಗುಡ್ಡ, ಬಸು ಜಂಗಮರ, ಕೆಂಚಪ್ಪ ಇಂಗಳೆ, ದುಂಡುಸಾ ಕಾಟವಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net