

ಹುಕ್ಕೇರಿ: ಪಟ್ಟಣದ ಎಸ್‌ಕೆ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅಶ್ವಿನಿ ಬಡಮಲ್ಲನವರ ಅವರು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದಲ್ಲಿ ಆಕ್ಸಫರ್ಡ್ ಪಾಟೀಲ ಸಮೂಹ ಶಿಕ್ಷಣ ಸಂಸ್ಥೆ ಈಚೆಗೆ ಹಮ್ಮಿಕೊಂಡಿದ್ದ `ಆಕ್ಸ್-ಫರ್ಡ್ ಜೀನಿಯಸ್-೨೦೨೫' ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ೭೫ ಸಾವಿರ ರೂ. ನಗದು ಸಹಿತ ಟ್ರೋಫಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಚೇರ್ಮನ್ ಪಿಂಟು ಶೆಟ್ಟಿ ಹಾಗೂ ಪಾಲಕರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.