ಅಶ್ವಥ್ ನಾರಾಯಣ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

Siddaramaih Abhimani Balaga
Published on

ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಿಪ್ಪುಗೆ ಹೊಡೆದಂತೆ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿರುವ ಅಶ್ವಥ್ ನಾರಾಯಣ್ ಅವರನ್ನು ಉನ್ನತ ಶಿಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸಿದ್ಧರಾಮಯ್ಯ ಅಭಿಮಾನಿ ಬಳಗದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಅಶ್ವಥ್ ನಾರಾಯಣ್ ಅವರು ನೀಡಿರುವ ಪ್ರಚೋದನಾಕಾರಿ ಹೇಳಿಕೆಯನ್ನು ಖಂಡಿಸಲಾಗುತ್ತದೆ. ಅಶ್ವಥ್ ನಾರಾಯಣ್ ಅವರಿಗೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸದಂತೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಕರಾಟೆ, ಮುಖಂಡರಾದ ಬಸವರಾಜ ಮಾಳಗೆ, ಅನಿಲ್ ಬೆಲ್ದಾರ್, ಬಾಬು ಪಾಸ್ವಾನ್, ಶಿವಕುಮಾರ ನೀಲಕಟ್ಟಿ, ಜಾನ್ ವೆಸ್ಲಿ, ಅಬ್ದುಲ್ ಮನ್ನಾನ್ ಸೇಠ್, ಮೋಹನ್ ಡಾಂಗೆ, ಕೆ.ಡಿ. ಗಣೇಶ, ಸಚಿನ್ ಮಲ್ಕಾಪುರ, ಓಂಕಾರ ನಾಸೆ, ಸಿದ್ದು ಗಾದಗಿ, ಕುಶಲಾ ಹಾಸಗೊಂಡ, ಸಂತೋಷ ಜೋಳದಾಪಕೆ, ಡಾ. ಕಾಮಶೆಟ್ಟಿ ಅಲಿಯಂಬರ್, ಕಲ್ಲಪ್ಪ ಯರನಳ್ಳಿ, ಸಂಗು ಚಿದ್ರಿ ತುಕಾರಾಮ ಚಿದ್ರಿ, ಬಾಲಾಜಿ ಭಾಲ್ಕಿ, ನರಸಪ್ಪ ಯಾಕತಪುರ, ತಿಪ್ಪಣ್ಣ ಬರಿದಾಬಾದ್, ಧನರಾಜ ಅತಿವಾಳ, ಬಾಬುರಾವ್ ಸಂಗೋಳಗಿ, ಸಂಜಯ್ ಜಾಗೀರದಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net