

ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದಿಂದ ನೀಡಲಾಗುವ ದತ್ತಿ ನಿಧಿ ಪ್ರಶಸ್ತಿಗೆ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸೇರಿ 14 ಸಾಧಕರು ಆಯ್ಕೆಯಾಗಿದ್ದಾರೆ.
ಬೃಹೈಕ್ಯ ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಣಾರ್ಥ ಶ್ರೀಮಠವು ನೀಡುವ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಹುಬ್ಬಳ್ಳಿ ಅವ್ವ ಸೇವಾ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿಗೆ ಚೇತನಾ ಬೆಳಗೆರೆ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ ಸೋಮಶೇಖರ ಪ್ರಶಸ್ತಿಗೆ ಅಶೋಕ ಚಂದರಗಿ, ಹವ್ವಾ ಹಸನ್ ಫೌಂಡೇಷನ್ ಪ್ರಶಸ್ತಿಗೆ ಜಿ.ಸುಬ್ರಾಯ ಭಟ್ ಭಟ್ಕಳ, ಕೆವಿಆರ್ ಠಾಗೋರ್ ಸ್ಮರಣಾರ್ಥ ಭಾಗ್ಯ ಠಾಗೋರ್ ಪ್ರಶಸ್ತಿಗೆ ಇಬ್ರಾಹಿಂ ಅಡ್ಕಸ್ಥಳ, ಶತಾಯುಷಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೆಸರಿನ ದತ್ತಿನಿಧಿ ಪ್ರಶಸ್ತಿಗೆ ವಾಲ್ಟರ್ ನಂದಳಿಕೆ, ಮಕ್ಕಳ ತಜ್ಞ ಡಾ.ಸುಧಾಕರ ಶೆಟ್ಟಿ ಪುಣೆ ದತ್ತಿನಿಧಿ ಪ್ರಶಸ್ತಿಗೆ ಎಚ್.ಬಿ.ಮದನಗೌಡ, ಮುಹಮ್ಮದ್ ಇಬ್ರಾಹಿಂಪುರ ಸ್ಮರಣಾರ್ಥ ವಕೀಲ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ಪ್ರಶಸ್ತಿಗೆ ನವೀನ್ ಕೆ.ಇನ್ನ, ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ನೀಡುವ ಪ್ರಶಸ್ತಿಗೆ ಡಾ.ನಂದಕುಮಾರ್ ಹೆಗಡೆ, ಸಮಾಜಸೇವಕ ಅಶ್ ಶಾ ಮಂತೂರು ಪ್ರಶಸ್ತಿಗೆ ಅನಿಲ್ ಎಚ್.ಟಿ., ಧರ್ಮದರ್ಶಿ ಅಣ್ಣಿ ಶೆಟ್ಟಿ ನವಮುಂಬಯಿ ಪ್ರಶಸ್ತಿಗೆ ಸದಾನಂದ ಜೋಶಿ, ಕೆಯುಡಬ್ಲುೃಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿಗಳಿಗೆ ದಿವಾಕರ ಬಿ. ಶೆಟ್ಟಿ ಮತ್ತು ಬಿ.ಪಿ.ಶೇಣಿ ಆಯ್ಕೆಯಾಗಿದ್ದಾರೆ.
ಕಾಸರಗೋಡಿನ ಸೀತಾಂಗೋಳಿಯ ಆಲಯನ್ಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜು.13ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.