

ಚಿತ್ರದುರ್ಗ: ನಗರದ ಸಿಟಿ ಇನ್ಸಿಟಿಟ್ಯೂಟ್‌ನ ನಮ್ಮ ಆಡಳಿತಾವಧಿ ಅವ್ಯವಹಾರ ನಡೆದಿಲ್ಲ ಎಂದು ಮಾಜಿ ಕಾರ್ಯದರ್ಶಿ ಚಿತ್ರಲಿಂಗಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸೇರಿ ಕೆಲವು ಪದಾಧಿಕಾರಿಗಳ ವಿರುದ್ಧ ಇನ್ಸಿಟಿಟ್ಯೂಟ್‌ನ ಕೆಲ ಸದಸ್ಯರು ಈಚೆಗೆ ಹೊರೆಸಿರುವ ಕೋಟ್ಯಂತರ ರೂ. ಅವ್ಯವಹಾರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ಸದ್ಯದಲ್ಲೇ ಎದುರಾಗಲಿರುವ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ ಗೆಲುವಿಗಾಗಿ ಆಧಾರ ರಹಿತ ಆರೋಪಗಳನ್ನು ಹೊರೆಸುವ ಹುನ್ನಾರು ಇದಾಗಿದೆ ಎಂದು ದೂರಿದರು.
ಜಿಲ್ಲಾಡಳಿತ ನೇಮಿಸಿರುವ ಆಡಳಿತಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿ, ಸಂಸ್ಥೆ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ ಎಂದರು.
ನಿಕಟಪೂರ್ವ ಖಜಾಂಚಿ ವಿ.ಎನ್.ಅಜಿತ್ ಪ್ರಸಾದ್ ಜೈನ್ ಮಾತನಾಡಿ, ಹೊಸ ಸದಸ್ಯರಿಂದ ನಗದಾಗಿ ಸ್ವೀಕರಿಸಿದ್ದ ಸದಸ್ಯತ್ವ ಮೊತ್ತವನ್ನು ಹಾಗೂ ಸಂಸ್ಥೆಯ ಇತರ ಆದಾಯವನ್ನೂ ಬ್ಯಾಂಕಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು. ಕೆ.ಎಸ್.ಕರಿಯಪ್ಪ ಇದ್ದರು.