ಅವೈಜ್ಞಾನಿಕ ಹಂಪ್​ನಿಂದ ಸಂಚಾರ ದುಸ್ತರ

Published on
ಮಾಲೂರು&ಹೊಸೂರು ಮುಖ್ಯರಸ್ತೆಯ ಕೋಡಿಹಳ್ಳಿಗೇಟ್​ ಸಮೀಪ ಲಾರಿ ವಾಹನಗಳು ಚಾಸಿ, ಆಕ್ಸೆಲ್​ ಮುರಿದು ರಸ್ತೆಯ ಮಧ್ಯದಲ್ಲಿ ನಿಂತಿರುವುದು.
ಮಾಲೂರು&ಹೊಸೂರು ಮುಖ್ಯರಸ್ತೆಯ ಕೋಡಿಹಳ್ಳಿಗೇಟ್​ ಸಮೀಪ ಲಾರಿ ವಾಹನಗಳು ಚಾಸಿ, ಆಕ್ಸೆಲ್​ ಮುರಿದು ರಸ್ತೆಯ ಮಧ್ಯದಲ್ಲಿ ನಿಂತಿರುವುದು.

ಕೆ.ಆರ್​.ಚಂದ್ರಶೇಖರ್​, ಲಕ್ಕೂರು
ಮಾಲೂರು&ಹೊಸೂರು ಮುಖ್ಯರಸ್ತೆಯ ಕೋಡಿಹಳ್ಳಿ ಗೇಟ್​ ಸಮೀಪ ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕವಾಗಿ ರಸ್ತೆ ತಡೆ ಉಬ್ಬುಗಳನ್ನು ನಿರ್ಮಿಸಿರುವುದರಿಂದ ಸುಗಮ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಕೋಡಿಹಳ್ಳಿಗೇಟ್​ನ ಸಾರ್ವಜನಿಕರು ಆರೋಪಿಸಿದ್ದಾರೆ.
ಮಾಲೂರು ತಾಲೂಕಿನ ಕೋಡಿಹಳ್ಳಿಗೇಟ್​ ಸಮೀಪ ಗುರುವಾರ ಬೆಳಗ್ಗೆ ತಮಿಳುನಾಡಿನ ಹೊಸೂರು ಕಡೆಗೆ ಹೊರಟಿದ್ದ ಸರಕು ಸಾಗಾಣೆ 2 ವಾಹನಗಳು ಒಂದೇ ಬಾರಿಗೆ ಆಕ್ಸೆಲ್​ ಮುರಿದು ನಿಂತ ಪರಿಣಾಮ ಮಾಲೂರು ಹಾಗೂ ಹೊಸೂರು ಕಡೆಗೆ ಸುಮಾರು 6 ಕಿಮೀ ವರೆಗೂ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ಟ್ರಾಫಿಕ್​ ಜಾಮ್​ ಉಂಟಾಯಿತು. ಕೋಡಿಹಳ್ಳಿಗೇಟ್​ನ ಸಾರ್ವಜನಿಕರು ಪೊಲೀಸ್​ ಠಾಣೆಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಹಿತಿ ನೀಡಿದ ತಕ್ಷಣ ಸ್ಪಂದಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಅವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಿರುವುದರಿಂದ ಈ ಭಾಗದಲ್ಲಿ ಅಪಘಾತಕ್ಕೆ ಕಾರಣವಾಗಿದೆ. ವೇಗವಾಗಿ ಬರುವ ವಾಹನಗಳಿಗೆ ರಸ್ತೆ ಉಬ್ಬು ಸರಿಯಾಗಿ ಕಾಣದೆ ವಾಹನವನ್ನು ವೇಗವಾಗಿ ಹತ್ತಿಸಿದಾಗ ಚಾಸಿ ಅಥವಾ ಆಕ್ಸೆಲ್​ ಮುರಿದು ರಸ್ತೆ ಮಧ್ಯೆಯೇ ವಾಹನ ನಿಂತುಕೊಳ್ಳುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಮುಖ್ಯ ರಸ್ತೆಯೂ ಇಕ್ಕಾಟ್ಟಾಗಿದ್ದು, ಪ್ರತಿ ಗಂಟೆಗೆ 1 ಸಾವಿರ ವಾಹನಗಳು ಸಂಚರಿಸುತ್ತವೆ. ಆಕಸ್ಮಿಕವಾಗಿ ಅಪಘಾತವಾದರೆ ಸಂಚರಿಸುವ ವಾಹನಗಳು ಬದಲಿ ರಸ್ತೆ ಬಳಕೆ ಮಾಡಿ ಸುಮಾರು 10 ಕಿಮೀ ಸುತ್ತಿ ಬಳಸಿ ಮುಖ್ಯರಸ್ತೆಗೆ ಬರಬೇಕಾಗುತ್ತದೆ. ಇದರಿಂದ ವಾಹನ ಚಾಲಕರಿಗೆ ಬಹಳ ತೊಂದರೆಯಾಗುತ್ತಿದೆ. ರಸ್ತೆ ತಡೆ ಉಬ್ಬನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಾಲೂರು & ಹೊಸೂರು ಮುಖ್ಯರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತಿಲ್ಲ. ಖಾಸಗಿ ಕಂಪನಿಗಳ ಹಾಗೂ ವಿದ್ಯಾಸಂಸ್ಥೆಗಳ ಸಮೀಪ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರಿಂದ ರಸ್ತೆ ತಡೆಗಳನ್ನು ನಿರ್ಮಿಸಲಾಗಿದೆ. ಕೋಡಿಹಳ್ಳಿಗೇಟ್​ ಸಮೀಪ ನಿರ್ಮಿಸಿರುವ ಎತ್ತರದ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ ಬೇರೆ ರೀತಿಯಲ್ಲಿ ನಿರ್ಮಿಸಲಾಗುವುದು. ಚಲಪತಿ ಸೆಕ್ಷನ್​ ಅಧಿಕಾರಿ, ಮಾಲೂರು

ವಾರದಲ್ಲಿ 2 ರಿಂದ 3 ನ ವಾಹನಗಳು ಚಾಸಿ, ಆಕ್ಸೆಲ್​ ಮುರಿದು ರಸ್ತೆ ಮಧ್ಯದಲ್ಲಿ ನಿಲ್ಲುತ್ತಿರುವುದರಿಂದ ವಾಹನ ಸವಾರರಿಗೆ, ರೋಗಿಗಳಿಗೆ ತೊಂದರೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಸುತ್ತಮುತ್ತಲ ಗ್ರಾಮಗಳಿಗೆ ಕೋಡಿಹಳ್ಳಿ ಗೇಟ್​ ವಾಣಿಜ್ಯ ವ್ಯಾಪಾರ ಕೇಂದ್ರವಾಗಿದ್ದು, ಇಲ್ಲಿ ರಸ್ತೆ ಸಮಸ್ಯೆಯಿಂದ ಸಾರ್ವ ಜನಿಕರಿಗೆ ತೊಂದರೆ ಯಾಗುತ್ತಿದೆ. ಆಂಜಿನಪ್ಪ ಕುಟ್ಟಿ ಕೋಡಿಹಳ್ಳಿಗೇಟ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net