ಅವೈಜ್ಞಾನಿಕ ಯೋಜನೆ ನಿಲ್ಲಿಸಲು ಸಕಲ ಪ್ರಯತ್ನ

5sgr3
ಸಾಗರ ಉಪವಿಭಾಗಾಕಾರಿ ಕಚೇರಿ ಆವರಣದಲ್ಲಿ ರೈತ ಸಂಘ ನಡೆಸುತ್ತಿರುವ ಶರಾವತಿ ಪಂಪ್ಡ್ೃ ಸ್ಟೋರೆಜ್ ವಿರುದ್ಧದ ಹೋರಾಟದಲ್ಲಿ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ದಿನೇಶ್ ಶಿರವಾಳ, ರಮೇಶ್ ಕೆಳದಿ ಇತರರಿದ್ದರು.
Published on

ಸಾಗರ: ಶರಾವತಿ ಪಂಪ್ಡ್ೃ ಸ್ಟೋರೆಜ್ ವಿರುದ್ಧದ ಹೋರಾಟಕ್ಕೆ ಬೆಂಬಲ ಇದ್ದು, ಮುಂದಿನ ಪೀಳಿಗೆ ಹಿತದೃಷ್ಟಿಯಿಂದ ಪರಿಸರ ಉಳಿಸಿ ಬೆಳೆಸುವುದು ಆದ್ಯತೆಯಾಗಬೇಕು. ಸಸ್ಯರಾಶಿ ಒಡಲು ಬಗಿಯುವ ಯೋಜನೆ ಸಲ್ಲದು ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸಾಗರ ಉಪವಿಭಾಗಾಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಶರಾವತಿ ಪಂಪ್ಡ್ೃ ಸ್ಟೋರೆಜ್ ವಿರುದ್ಧದ ಹೋರಾಟದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿ, ಶರಾವತಿ ಪಂಪ್ಡ್ೃ ಸ್ಟೋರೆಜ್ ವಿರುದ್ಧ ಪಕ್ಷಾತೀತ ಹೋರಾಟ ಸ್ವಾಗತಾರ್ಹ ಎಂದು ತಿಳಿಸಿದರು.

ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇದ್ದರೂ ಶರಾವತಿ ಪಂಪ್ಡ್ೃ ಸ್ಟೋರೆಜ್ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದು ಸಹಜ. ಕೇಂದ್ರ ಸರ್ಕಾರ ಬೇರೆ ಬೇರೆ ವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡುತ್ತ ಬರುತ್ತಿದ್ದರೂ ಶರಾವತಿ ಪಂಪ್ಡ್ೃ ಸ್ಟೋರೆಜ್‌ನಿಂದ ಆ ಭಾಗದ ಪರಿಸರ, ಜೀವವೈವಿಧ್ಯಕ್ಕೆ ಹಾನಿಯಾಗುತ್ತಿರುವುದರ ಬಗ್ಗೆ ಕೇಂದ್ರದ ಸಂಬಂಧಪಟ್ಟ ಸಚಿವರು, ಇಲಾಖೆ ಜತೆ ಚರ್ಚಿಸುತ್ತೇನೆ. ನಾನು ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಜಂಟಿಯಾಗಿ ಯೋಜನೆಗೆ ಪರವಾನಗಿ ಸಿಗದಂತೆ ಪ್ರಯತ್ನಿಸುತ್ತೇವೆ ಎಂದರು.

ಯೋಜನೆಗಾಗಿ ಹಣ ಪಡೆದಿದ್ದಾರೆ ಎಂಬ ಸುಳ್ಳು ಆರೋಪ ನಂಬಬೇಡಿ, ಯೋಜನೆ ನಿಲ್ಲಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ. ಪಂಪ್ಡ್ ಸ್ಟೋರೆಜ್ ಬಿಟ್ಟು ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ರಮೇಶ್ ಕೆಳದಿ, ಅಖಿಲೇಶ್ ಚಿಪ್ಳಿ, ಟಿ.ಡಿ.ಮೇಘರಾಜ್, ಎಸ್.ವಿ.ಹಿತಕರ ಜೈನ್, ಮಲ್ಲಿಕಾರ್ಜುನ ಹಕ್ರೆ, ಸುವರ್ಣಾ ಟೀಕಪ್ಪ ಇತರರಿದ್ದರು.

ಶರಾವತಿ ಪಂಪ್ಡ್ೃ ಸ್ಟೋರೆಜ್ ಯೋಜನೆ ಸಂಪೂರ್ಣ ಅವೈಜ್ಞಾನಿಕ. ವೈಜ್ಞಾನಿಕವಾಗಿ ಇದು ಸಾಧ್ಯವೇ ಇಲ್ಲ ಎನ್ನುವುದನ್ನು ತಜ್ಞರೇ ಹೇಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಯೋಜನೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಅನೇಕ ಅನುಮಾನಕ್ಕೆ ಕಾರಣ. ಇದು ಅಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಹಣ ಹೊಡೆಯಲು ಮಾಡಿರುವ ಯೋಜನೆ. ರಾಜ್ಯ ಸರ್ಕಾರ ತಕ್ಷಣ ಈ ಯೋಜನೆ ಕೈಬಿಡಬೇಕು.

ರವಿಕೃಷ್ಣ ರೆಡ್ಡಿ, ಕೆಆರ್‌ಎಸ್ ಪಕ್ಷದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net