ಅವೈಜ್ಞಾನಿಕ ಜಾತಿ ಜನಗಣತಿ ವರದಿ ರದ್ದುಗೊಳಿಸಿ: ಕಾಂಗ್ರೆಸ್ ಮುಖಂಡ ಎಂ.ಎನ್.ನವೀನ್‌ಕುಮಾರ್ ಆಗ್ರಹ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ಮೈಸೂರು

ಅವೈಜ್ಞಾನಿಕವಾಗಿರುವ ಜಾತಿ ಜನಗಣತಿ ವರದಿಯನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂ.ಎನ್.ನವೀನ್ ಕುಮಾರ್ ಆಗ್ರಹಿಸಿದರು.

ಎಸ್.ಕಾಂತರಾಜು ವರದಿಯಲ್ಲಿ ಬ್ರಾಹ್ಮಣರು ರಾಜ್ಯದಲ್ಲಿ ಸುಮಾರು 17.5 ಲಕ್ಷ ಜನಸಂಖ್ಯೆ ಇದ್ದಾರೆ ಎಂದು ಹೇಳಲಾಗಿದೆ. ಆದರೆ ಸುಮಾರು 35 ಲಕ್ಷಕ್ಕೂ ಹೆಚ್ಚಿದ್ದೇವೆ. ಸಮುದಾಯ ಜನಸಂಖ್ಯೆಯನ್ನು ಕಡಿಮೆ ತೋರಿಸಿ ಪ್ರಾತಿನಿಧ್ಯವನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ.

ಹೀಗಾಗಿ, ಈ ವರದಿಯನ್ನು ತಿರಸ್ಕರಿಸಿ ನೂತನ ಸಮೀಕ್ಷೆ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಬ್ರಾಹ್ಮಣ ವಿದ್ಯಾರ್ಥಿ ಜನಿವಾರ ತೆಗೆಸಲು ಪ್ರಯತ್ನಿಸಿ, ಪರೀಕ್ಷೆ ಬರೆಯದಂತೆ ಮಾಡಿರುವುದು ಖಂಡನೀಯ.

ಕೂಡಲೇ ಆ ವಿದ್ಯಾರ್ಥಿಗೆ ಮರುಪರೀಕ್ಷೆ ನಡೆಸಬೇಕು. ಸಂಬಂಧಪಟ್ಟ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಯುವ ಬ್ರಾಹ್ಮಣ ಮಹಾಸಭಾದ ಆರ್.ಎಸ್.ಸತ್ಯನಾರಾಯಣ, ಬಿ.ವಿ.ಗದಾಧರ, ಅಗಸ್ತ್ಯ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಸಿ.ವಿ.ಪಾರ್ಥಸಾರಥಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net