ಅವೈಜ್ಞಾನಿಕ ಕ್ರಮಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ: ರಘುಪಾಳ್ಯ

ಅವೈಜ್ಞಾನಿಕ ಕ್ರಮಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ: ರಘುಪಾಳ್ಯ
Published on

ಆಲೂರು: ಬೆಂಗಳೂರು-ಮಂಗಳೂರು  ದಶಪಥ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಯಲ್ಲಿನ‌  ಕೆಲ ಅವೈಜ್ಞಾನಿಕ ಕ್ರಮಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ತಕ್ಷಣ ಇವನ್ನು ಸರಿಪಡಿಸದಿದ್ದರೆ ಕರವೇ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಂದು ಕರವೇ ಜಿಲ್ಲಾ ಕಾರ್ಯದರ್ಶಿ ರಘುಪಾಳ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಾಲೂಕಿನ ಪಾಳ್ಯ ಹೋಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ75ರ ಪಕ್ಕದಲ್ಲಿ ಕಣದಲ್ಲಿ ಹಾಗೂ ಮಗ್ಗೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆಗಳಿವೆ ಅವುಗಳನ್ನು ಕ್ರಮವಾಗಿ ದುರಸ್ತಿಗೊಳಿಸಿ ಸಂಪರ್ಕ ನಿರ್ಮಿಸದ ಕಾರಣ ಉಂಟಾಗುವ ಅನಾಹುತದಿಂದ ಸ್ಥಳೀಯರು ಪ್ರಾಣ ತೆತ್ತುವಂತಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲ. ಪ್ರಯಾಣಿಕರ  ಸುರಕ್ಷತೆ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ಕಣದಲ್ಲಿ ಗ್ರಾಮದ ಈ ಸ್ಥಳದಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣವಾಗಿರುವ ಬಗ್ಗೆ ಸ್ಥಳೀಯರು ನಿರಂತರ ದೂರುತ್ತಿದ್ದಾರೆ. ಆದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇದರಿಂದ ಯಾವಾಗ ಬೇಕಾದರೂ ಅವಘಡ ಅಪಘಾತ ಸಂಭವಿಸ ಬಹುದು ಆದರಿಂದ  ಕೂಡಲೇ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಈ ಭಾಗದ ಗ್ರಾಮಸ್ಥರನ್ನೊಳಗೊಂಡು  ಕರವೇ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಸುದೀಶ್, ಮಹೇಶ್, ಯಶ್ವಂತ್, ಪ್ರತಾಪ್ ಸ್ಥಳೀಯ ಗ್ರಾಮಸ್ಥರಾದ ಬಸವರಾಜ, ಪುರುಷೋತ್ತಮ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net