ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

11_09_Mdy_02(Protest)
Published on


ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಸಾಕಷ್ಟು ಅವ್ಯವಹಾರ ನಡೆದಿದ್ದು, ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷೃಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ವಿವಿಧ ಗ್ರಾಮಸ್ಥರು ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಭಾನುವಾರವೂ ಪ್ರತಿಭಟನೆ ನಡೆಸಿದರು.

ಶನಿವಾರ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಪ್ರತಿಭಟನಾಕಾರರು ಗುತ್ತಿಗೆ ಪಡೆದ ಕಂಪನಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಭಾನುವಾರ ಕೂಡ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ವೇದಿಕೆ ಜಿಲ್ಲಾಧ್ಯಕ್ಷೃ ಎಚ್.ಡಿ.ಜಯರಾಂ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಉಮ್ಮಡಹಳ್ಳಿ ಗೇಟ್ ಬಳಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ಗುಣಮಟ್ಟದ ಕಾಮಗಾರಿಯಲ್ಲಿ ಟೋಲ್ ರಸ್ತೆ ಹಾಗೂ ಸವೀಸ್ ರಸ್ತೆ ನಿರ್ಮಿಸಬೇಕು. ಬೆಂಗಳೂರು-ಮೈಸೂರು ರಸ್ತೆಯುದ್ದಕ್ಕೂ ಬರುವ ಗ್ರಾಮಗಳ ಜನರಿಗೆ ಈ ರಸ್ತೆ ಬಳಕೆಗೆ ಯಾವುದೇ ಟೋಲ್ ವಿಧಿಸಬಾರದು ಎಂದು ಆಗ್ರಹಿಸಿದರು.

ಹೆದ್ದಾರಿ ನಿರ್ವಾಣ ಕಾಮಗಾರಿ ಸಾವಿರಾರು ಕೋಟಿ ರೂ. ಹಗರಣವಾಗಿದೆ. ಇಡೀ ಯೋಜನೆಯ ಪ್ರಕ್ರಿಯೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಯೋಜನೆಯ ಮೂಲನಕ್ಷೆ ಹಾಗೂ ಕಾಮಗಾರಿಗಳ ವಿವರ ಕುರಿತ ನಾಮಫಲಕವನ್ನು ನಿಯವಾನುಸಾರ ಪ್ರಕಟಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಡಿಬಿಎಲ್ ಕಂಪನಿ ಜತೆಗಿನ ಒಪ್ಪಂದ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ದಶಪಥ ರಸ್ತೆ ನಿರ್ಮಿಸುವುದಾಗಿ ಹೆದ್ದಾರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ವಾತ್ರ ದಶಪಥ ರಸ್ತೆ ನಿರ್ವಾಣವಾಗಿದ್ದರೆ, ಮತ್ತೆ ಕೆಲ ಕಡೆಗಳಲ್ಲಿ ಉದ್ದೇಶ ಈಡೇರದೆ ನನೆಗುದಿಗೆ ಬಿದ್ದಂತಾಗಿದೆ. ಸರ್ವೀಸ್ ರಸ್ತೆಗಳು ಸಹ ಕಳಪೆಯಿಂದ ಕೂಡಿದೆ. ಅದನ್ನು ಸಹ ಸರಿಪಡಿಸಬೇಕು. ಗ್ರಾವಾಂತರ ಪ್ರದೇಶಗಳಿಗೆ ತೆರಳುವವರಿಗೆ ತೀವ್ರ ಅನನುಕೂಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಚಿಕೈದೇಗೌಡ, ಟಿ.ಕೆ.ಸೋಮಶೇಖರ್, ವೆಂಕಟೇಶ್, ಮಹೇಂದ್ರ, ಮುದ್ದೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net