

ಶಿರಹಟ್ಟಿ: ಬೇಕಾಬಿಟ್ಟಿ ವಿದ್ಯುತ್ ಬಳಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಲ್ ಪಾವತಿಸಬೇಕಾಗುತ್ತದೆ. ಅವಶ್ಯವಿದ್ದಲ್ಲಿ ಮಾತ್ರ ವಿದ್ಯುತ್ ಬಳಸಬೇಕು ಎಂದು ಹೆಸ್ಕಾಂ ಇಲಾಖೆ ಎಇಇ ಎಂ.ಟಿ. ದೊಡ್ಡಮನಿ ಹೇಳಿದರು.
ವಿದ್ಯುತ್ ಬಳಕೆಯಲ್ಲಿ ಸುರಕ್ಷೆ ಮತ್ತು ಉಳಿತಾಯ ಕ್ರಮಗಳ ಬಗ್ಗೆ ಶಿರಹಟ್ಟಿ ಹೆಸ್ಕಾಂ ಇಲಾಖೆಯಿಂದ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನೆ ಬಳಕೆಗೆ ಎಲ್ಇಡಿ ಬಲ್ಬ್ಗಳನ್ನು ಬಳಸುವುದು ಸೂಕ್ತ. ಮುಖ್ಯವಾಗಿ ವಿದ್ಯುತ್ ಅವಘಡ ಸಂಭವಿಸಿದರೆ ಶೀಘ್ರವೇ ಇಲಾಖೆ ಗಮನಕ್ಕೆ ತಂದರೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಗುತ್ತದೆ. ಅದಕ್ಕೆ ಎಲ್ಲರ ಸಹಾಯ- ಸಹಕಾರ ಅಗತ್ಯ ಎಂದರು.
ಗ್ರಾಪಂ ಸದಸ್ಯ ಮೋಹನ ಗುತ್ತೆಮ್ಮನವರ ಮಾತನಾಡಿ, ಅನಗತ್ಯವಾಗಿ ವಿದ್ಯುತ್ ಪೋಲಾಗದಂತೆ ಮಿತವಾಗಿ ಬಳಸಿದರೆ ಹಣ ಉಳಿತಾಯ ಮಾಡಬಹುದು. ಹಾಗೆಯೇ ಬಳಕೆಯ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವ ಜತೆಗೆ ವಿದ್ಯುತ್ ಬಳಕೆ ಉಪಕರಣಗಳು ಮಕ್ಕಳ ಕೈಗೆಟುಕದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಫಕೀರವ್ವ ಬಾವಳ್ಳಿ, ಸದಸ್ಯ ಶಿವನಗೌಡ ಪಾಟೀಲ, ನಾಗರಾಜ ಅಕ್ಕೂರ, ರಬ್ಬಾನಿ ಚೌರಿ, ಹೆಸ್ಕಾಂ ಶಾಖಾಧಿಕಾರಿ ವಿಜಯಕುಮಾರ ಕರ್ಣಂ, ವಿ.ಎಂ. ಕೊಡಬಾಳ, ಹೆಸ್ಕಾಂ ಸಿಬ್ಬಂದಿ ಗುರುರಾಜ ಸಿ., ಚಿಕ್ಕಮಠ, ಗ್ರಾಪಂ ಪಿಡಿಒ ಎಸ್.ವಿ. ಕಲ್ಲೊಡ್ಡರ, ಕಾರ್ಯದರ್ಶಿ ತಳವಾರ, ಇತರರಿದ್ದರು.
===========
ಲಕ್ಷ್ಮೇಶ್ವರ, ವಸ್ತು ಪ್ರದರ್ಶನ, ಸುರೇಶ ರಾಚನಾಯ್ಕರ, ಅಭಿಪ್ರಾಯ
ನಿರುದ್ಯೋಗಿಗಳಿಗೆ ಪೂರಕ ವೇದಿಕೆ ಸೃಷ್ಟಿ
ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ದೇಶಪಾಂಡೆ ಫೌಂಡೇಷನ್ ವತಿಯಿಂದ 4 ದಿನಗಳ ಕಾಲ ಹಮ್ಮಿಕೊಂಡಿರುವ ನವೋದ್ಯಮ ಸಂತೆ, ಗೃಹ ಕೈಗಾರಿಕಾ ತರಬೇತಿ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನಕ್ಕೆ ದೇವಸ್ಥಾನ ಕಮಿಟಿ ಪ್ರಮುಖ ಸುರೇಶ ರಾಚನಾಯ್ಕರ ಶುಕ್ರವಾರ ಚಾಲನೆ ನೀಡಿದರು.
‘ಗ್ರಾಮೀಣ ಮತ್ತು ಮಧ್ಯಮ ಪಟ್ಟಣ ಪ್ರದೇಶಗಳ ನಿರುದ್ಯೋಗಿ ಯುವಕ-ಯುವತಿಯರು, ಗೃಹಿಣಿಯರು, ರೈತರು, ಕರಕುಶಲ ಕರ್ವಿುಗಳು ಮಾಹಿತಿ ಕೊರತೆಯಿಂದ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರಿಗೆ ಪೂರಕ ವೇದಿಕೆ ಸೃಷ್ಟಿಸಿ ಪ್ರೋತ್ಸಾಹಿಸುವ, ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ದೇಶಪಾಂಡೆ ಫೌಂಡೇಷನ್ ಮಾರುಕಟ್ಟೆ ವಿಭಾಗದ ಅಧಿಕಾರಿ ರಾಜು ಎಚ್. ಮಾತನಾಡಿ, ನವೋದ್ಯಮಿ ಸಂತೆ, ವಸ್ತು ಪ್ರದರ್ಶನದಲ್ಲಿ ಹುಬ್ಬಳ್ಳಿ, ಹಾವೇರಿ, ಗದಗ ಜಿಲ್ಲೆಗಳ ಕರಕುಶಲ ಕರ್ವಿುಗಳು, ನವೋದ್ಯಮಿಗಳು ಪಾಲ್ಗೊಂಡಿದ್ದಾರೆ. ಅವರು ತಮ್ಮ ಮಾರುಕಟ್ಟೆ ವಿಸ್ತರಿಸುವ ಎಲ್ಲ ಅವಕಾಶಗಳು ಇದರಲ್ಲಿವೆ. ಗೃಹ ಕೈಗಾರಿಕೆ ಮಾಡುವ ಸ್ವಯಂ ಉದ್ಯೋಗಿಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸುವುದು, ವ್ಯವಹಾರಿಕ ನೈಪುಣ್ಯತೆಗಳ ಬಗೆಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ವಸ್ತು ಪ್ರದರ್ಶನದಲ್ಲಿ ಖಾದಿ ಬಟ್ಟೆ, ನೇಯ್ಗೆ ಸೀರೆಗಳು, ಅಲಂಕಾರಿಕ ವಸ್ತುಗಳು, ಆಯುರ್ವೆದ ಔಷಧಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು, ಸಿರಿಧಾನ್ಯಗಳು, ಪೇಪರ್ ಬ್ಯಾಗ್, ಕಲಾಕೃತಿಗಳನ್ನೊಳಗೊಂಡ 30ಕ್ಕೂ ಹೆಚ್ಚು ಮಳಿಗೆಗಳು ಜನರನ್ನು ಆಕರ್ಷಿಸಿದವು.
ಚಂಬಣ್ಣ ಬಾಳಿಕಾಯಿ, ಶಂಕರ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ದುಂಡೇಶ ಕೊಟಗಿ, ಮಂಜು ಗೊರವರ, ಸಂಗಮೇಶ ಬೆಳವಲಕೊಪ್ಪ, ಪ್ರವೀಣ ಬೋಮಲೆ ಇತರರಿದ್ದರು.
ಪೋಟೊ: 21-ಎಲ್ಎಕ್ಷ್ಆರ್-6