

ಬಾಬುರಾವ ಯಡ್ರಾಮಿ ಕಲಬುರಗಿ
ಕಲ್ಯಾಣ ಕರ್ನಾಟಕ ವಿಮೋಚನೆ ಸಂಗ್ರಾಮ ನೆನಪಿಸುವ ಮಹಾಗಾಂವ್ನ ಐತಿಹಾಸಿಕ ಜೈಲು (ಹಳೆಯ ಪೊಲೀಸ್ ಠಾಣೆ) ಆಳುವವರ ನಿರ್ಲಕ್ಷೃದಿಂದಾಗಿ ಹಾಳಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿರ್ಲಕ್ಷೃದಿಂದಾಗಿ ತನ್ನ ಕುರುಹು ಕಳೆದುಕೊಳ್ಳುತ್ತ ದಿನೇದಿನೆ ಕುಸಿಯುತ್ತ ಸ್ಮಾರಕವಾಗಿ ಉಳಿಯುವ ಬದಲಿಗೆ ಅವಸಾನದತ್ತ ಸಾಗಿದೆ.
1852ರಲ್ಲಿ ನಿಮರ್ಾಣಗೊಂಡಿರುವ ಈ ಜೈಲು ಸ್ವಾತಂತ್ರೃ ನಂತರ ತಾಲೂಕು ಪೊಲೀಸ್ ಠಾಣೆಯಾಗಿ ಮಾರ್ಪಟ್ಟಿತು. 1930ರಲ್ಲಿ ನವೀಕರಣಗೊಳಿಸಿ ಬ್ರಿಟಿಷ್ ಅಧಿಕಾರಿಗಳು ಮತ್ತು ನಿಜಾಮ್ ಪೊಲೀಸರು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದರು. ಇದರ ಪಕ್ಕದಲ್ಲಿರುವ ನಿಜಾಮರ ಶಸ್ತ್ರಾಗಾರ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇವೆರಡು ಈಗ ಅಕ್ರಮ ಚಟುವಟಿಕೆ ತಾಣವಾಗಿದೆ.
ಸ್ವಾತಂತ್ರೃ ಚಳವಳಿ ಹೋರಾಟಕ್ಕೆ ಧುಮುಕಿದ್ದ ಹುತಾತ್ಮ ಅಪ್ಪಾರಾವ ಪಾಟೀಲ್ ನೇತೃತ್ವದ ತಂಡದಲ್ಲಿದ್ದ ಬಾಪುಸಾಹೇಬ್, ಬಾಳಾಸಾಹೇಬ್, ಹನುಮಂತ್ರಾವ ಸಿಂಧೆೆ, ದೌಲತ್, ಶಂಕರ ಅಕ್ಕಸಾಲಿಗ, ಅಬ್ದುಲ್ ಪಾಷಾ ಇತರರನ್ನು ಬಂಧಿಸಿ ಇದೇ ಜೈಲಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿತ್ತು ಎಂಬುದು ಇತಿಹಾಸ.
ಬಹಳ ವರ್ಷ ಮಹಾಗಾಂವ್ ಪೊಲೀಸ್ ಠಾಣೆಯಾಗಿದ್ದ ಈ ಕಟ್ಟಡವನ್ನು ಪೊಲೀಸ್ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಆದರೆ ಹೊಸ ಕಟ್ಟಡವನ್ನು ಹೈನುಗಾರಿಕೆ ವಿಜ್ಞಾನ ಕಾಲೇಜು ಎದುರು ನಿರ್ಮಿಸಿಕೊಂಡು ಸ್ಥಳಾಂತರಗೊಂಡ ಬಳಿಕ ಇದು ನಿರ್ಲಕ್ಷೃಕ್ಕೆ ಒಳಗಾಗಿ ಮಲ-ಮೂತ್ರ ತಾಣವಾಗುತ್ತಿದೆ. ಇದನ್ನು ಈಗಲೇ ರಕ್ಷಿಸದಿದ್ದರೆ ಸಂಪೂರ್ಣ ನಶಿಸಲಿದೆ.
ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಂತಹ ರಾಷ್ಟ್ರೀಯ ಪಾರಂಪರಿಕ ಕಟ್ಟಡ ನಿರ್ಲಕ್ಷಿಸಿದ್ದರ ಪರಿಣಾಮ ದುರುಪಯೋಗ ಆಗುತ್ತಿದೆ. ಇದರ ರಕ್ಷಣೆ ಜಿಲ್ಲಾಡಳಿತದ ಹೊಣೆ. ಸಂಘ ಸಂಸ್ಥೆಗಳಿಗೆ ಹಸ್ತಾಂತರ ಮಾಡಿ ವಸ್ತು ಸಂಗ್ರಹಾಲಯ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಯುವ ಅಗತ್ಯವಿದೆ.
ಮಹಾಗಾಂವ್ನ ಪಾರಂಪರಿಕ ಜೈಲು ಕಟ್ಟಡ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಹಾಳಾಗುತ್ತಿರುವ ಕಟ್ಟಡವನ್ನು ನಮಗೆ ಹಸ್ತಾಂತರಿಸಿದರೆ ವಸ್ತು ಸಂಗ್ರಹಾಲಯವಾಗಿ ಮಾಡಲು ಸಿದ್ಧ ಎಂದು ಹುತಾತ್ಮ ಅಪ್ಪಾರಾವ ಪಾಟೀಲ್ ಫೌಂಡೇಷನ್ ಅಧ್ಯಕ್ಷರಾದ ವಿಜ್ಞಾನಿ ಪ್ರೊ.ಬಿ.ಎ. ಪಾಟೀಲ್ ಹೇಳುತ್ತಾರೆ. ಕಲ್ಯಾಣ ಕನರ್ಾಟಕ ವಿಮೋಚನಾ ಹೋರಾಟದ ಸಂಕೇತವಾಗಿರುವ ಈ ಕಟ್ಟಡ ರಕ್ಷಿಸಲು ಪ್ರತಿಷ್ಠಾನಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಕೋರುತ್ತೇವೆ. ನೀಡಿದರೆ ಸ್ವಾತಂತ್ರೃ ಹೋರಾಟಗಾರರು ಮತ್ತು ಹುತಾತ್ಮರಿಗೆ ಮೀಸಲಾಗಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮಾಡಲಾಗುವುದು. ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಯೋಚನೆ ಮಾಡಲಿ ಎಂದು ವಿಜಯವಾಣಿಗೆ ತಿಳಿಸಿದ್ದಾರೆ. ವಿಮೋಚನಾ ಹೋರಾಟಕ್ಕೆ ಸಂಬಂಧಿಸಿದ 800 ಚಿತ್ರಗಳು ನಮ್ಮಲ್ಲಿವೆ. ಅವು ಸೇರಿ ಎಲ್ಲ ಹೋರಾಟಗಾರರು ನೆನಪಿನಲ್ಲಿ ಉಳಿಯವಂಥ ಕೆಲಸ ಮಾಡಬಹುದಾಗಿದೆ ಎನ್ನುತ್ತಾರೆ.
ಕಲ್ಯಾಣ ಕನರ್ಾಟಕ ವಿಮೋಚನಾ ಮ್ಯೂಸಿಯಂ
ಬಾಕ್ಸ್