ಹೀಗಿರುವಾಗ ಐತಿಹಾಸಿಕ ಹಿನ್ನೆಲೆಯುಳ್ಳ ಗದಗ ಬೆಟಗೇರಿ ಅವಳಿ ನಗರದ ನಾಗರಿಕರು ದಶಕಗಳಿಂದಲೂ ಕಂಡರಿಯದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುವಂಟಾಗಿರುತ್ತದೆ. ಅವಳಿ ನಗರದ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಸಮರ್ಪಕ ಕುಡಿಯುವ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿಯ ಕೊರತೆ, ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ನಿಯಂತ್ರಣ, ಬೀದಿ ದೀಪಗಳ ವ್ಯವಸ್ಥೆ,ಹೀಗೆ ಹಲವಾರು ಮೂಲಭೂತ ಸೌಕರ್ಯಗಳ ಕೋರತೆಯ ಆಗರದಲ್ಲಿ ಬದುಕುವಂತಾಗಿರುತ್ತದೆ.