

ಎನ್.ಆರ್.ಪುರ: ಗಡಿಗೇಶ್ವರ ರೈತ ಉತ್ಪಾದಕ ಸಹಕಾರ ಸಂಘ 4.51 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಕೆ.ವಿ.ದಿವಾಕರ ತಿಳಿಸಿದರು.
ಸದಸ್ಯರ ಸಭೆಯಲ್ಲಿ ಮಾತನಾಡಿ, ರೈತರಿಗೆ ಸಕಾಲದಲ್ಲಿ ಗೊಬ್ಬರ ಇತರ ವಸ್ತುಗಳನ್ನು ಸಂಘ ಪೂರೈಸಿದೆ. ಹೊಸದಾಗಿ ಪ್ರಾರಂಭಿಸಿದ ಅವಧಿ ಠೇವಣಿ ಯೋಜನೆಯನ್ನು ಸದಸ್ಯರು ಉಪಯೋಗಿಸಿಕೊಳ್ಳಬೇಕು ಎಂದರು.
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಕೃಷ್ಣ್ಣಮೂರ್ತಿ, ಎಂ.ಎಚ್.ಸುಚಿತ್ರಾಕುಮಾರಿ ಅವರು ರೈತರೊಂದಿಗೆ ಸಂವಾದ ನಡೆಸಿ ಅಡಕೆ, ಕಾಫಿ, ಕಾಳುಮೆಣಸಿನ ಕೃಷಿ ಮಾಹಿತಿ ನೀಡಿದರು. ಸಂಘದ ಸಿಇಒ ಎಚ್.ಜಿ.ಮನು, ಉಪಾಧ್ಯಕ್ಷ ಎಂ.ಯೋಗೇಂದ್ರ, ಕೆ.ಎಂ.ದುಗ್ಗಯ್ಯ, ಹುಯಿಗೆರೆ ಶೃಜಿತ್, ಎನ್.ಆರ್.ಮಂಜಪ್ಪ ಗೌಡ, ಎಚ್.ಟಿ.ಸುರೇಶ್, ಶ್ರೀಧರ್ ಕಾಮತ್, ಡಿ.ಭಾಸ್ಕರ್, ಸಿ.ಎಸ್.ದೇವರಾಜ್, ಎಲ್.ಕೆ.ಸುಭೀಕ್ಷ್ಷಾ, ಟಿ.ಮಧುರಾ, ಎನ್.ಜೆ.ಸುಬ್ಬರಾವ್, ಕೆ.ಎಸ್.ಸುಭಾಷ್, ನಿರೂಪಾ, ಸೆಹಗಲ್ ಫೌಂಡೇಷನ್‌ನ ಸುಮಂತ್, ಶಿವಾನಂದ ಇದ್ದರು.