ಅವಕಾಶಗಳ ಸದ್ಬಳಕೆಯಿಂದ ಉತ್ತಮ ಭವಿಷ್ಯ

26 SRT 1
Published on

ಶಿರಹಟ್ಟಿ: ವಿದ್ಯಾರ್ಥಿಗಳಿಗೆ ಪ್ರತಿದಿನವೂ ಚಿಕ್ಕ ಚಿಕ್ಕ ಅವಕಾಶಗಳು ಬರುತ್ತವೆ. ಅವುಗಳಿಗೆ ಹೇಗೆ ಸ್ಪಂದಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿಂತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಜ.ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಹಾಗೂ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪ್ರಮಾಣವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.

ಪ್ರಾಂಶುಪಾಲರಾದ ಡಾ. ಉಮೇಶ ಅರಹುಣಸಿ, ತಹಸೀಲ್ದಾರ್ ಅನಿಲ ಬಡಿಗೇರ, ಬಾಹುಬಲಿ ಜೈನರ, ಫಕೀರೇಶ ರಟ್ಟಿಹಳ್ಳಿ, ಹುಮಾಯೂನ್ ಮಾಗಡಿ, ನಂದಾ ಪಲ್ಲೇದ, ಸಿ.ಪಿ. ಕಾಳಗೆ, ಡಾ. ಸುನೀಲ ಬುರೆಬುರೆ, ಎಚ್.ಎಂ. ದೇವಗಿರಿ, ಗೂಳಪ್ಪ ಕರಿಗಾರ, ಡಿ.ಕೆ. ಹೊನ್ನಪ್ಪನವರ, ಅಜ್ಜುಗೌಡ ಪಾಟೀಲ, ಕೆ.ಎ. ಪಾಟೀಲ, ಗೀತಾ ಹಲಸೂರ, ನಂದಾ ಕಪ್ಪತ್ತನವರ, ಸಿ.ಸಿ. ನೂರಶೆಟ್ಟರ್, ಮಂಜುನಾಥ ಸೊರಟೂರ, ಪರಶುರಾಮ ಡೊಂಕಬಳ್ಳಿ, ಅಕ್ಬರ್ ಯಾದಗಿರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net