ಅವಕಾಶಗಳ ಸದ್ಬಳಕೆ ಮಾಡಿಕೊಂಡು ಬೆಳೆಯಿರಿ

klb7
ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀ ಅಭಿನವ ಶಿವಲಿಂಗ ಸ್ವಾಮಿಗಳು ಮಾತನಾಡಿದರು. ಡಾ. ಬಸವಂತರಾವ ಪಾಟೀಲ್, ನಾಗೇಂದ್ರಪ್ಪ ಕೆ., ಪೂಜಾ ಚಿತ್ತಾಪುರ ಇದ್ದರು.
Published on

ಆಳಂದ: ಇAದಿನ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ನುಡಿದರು.

ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷೀಕ ಸ್ನೇಹ ಸಮ್ಮೇಳನ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಅಕ್ಷರ ನೀಡಿದ ಗುರುಗಳು ಹಾಗೂ ಹೆತ್ತವರಿಗೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಬಾಗಲಕೋಟೆ ತಹಸೀಲ್ದಾರ್ ನಾಗೇಂದ್ರಪ್ಪ ಕೋಳಶೆಟ್ಟಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ಸತತ ಅಧ್ಯಯನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸರ್ಕಾರಿ ಉದ್ಯೋಗ ಪಡೆಯಲು ಸಾಕಷ್ಟು ಅವಕಾಶಗಳಿವೆ. ಪ್ರತಿ ಹಂತದಲ್ಲೂ ಸಕ್ರಿಯವಾಗಿ ತಯಾರಿ ಮಾಡಿಕೊಳ್ಳಬೇಕು. ನಿಮ್ಮ ಕನಸು ದೊಡ್ಡದಾಗಿರಲಿ, ಕನಸಿಗೆ ನೀರುಣಿಸುವ ಪಾಲಕರ ಶ್ರಮ ಎಂದು ಮರೆಯಬಾರದು ಎಂದರು.

ಚಿಂತಕಿ ಹಾಗೂ ಬರಹಗಾರ್ತಿ ಪೂಜಾ ಚಿತ್ತಾಪುರ ಮಾತನಾಡಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಯಲ್ಲಪ್ಪ ಇಂಗಳೆ, ಪ್ರಾಚಾರ್ಯ ಡಾ.ಬಸವಂತರಾವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಪರಮೇಶ್ವರ ಭೂಸನೂರ, ಡಾ.ರಾಜುಕಮಾರ ಹಿರೇಮಠ, ಡಾ.ಬಸಣ್ಣ ಶೆಟ್ಟಿ, ಗೋದಾವರಿ ಪಾಟೀಲ್, ಶ್ರವಣಕುಮಾರ ಕಾಂಬಳೆ, ಶಂಕರ ಸೂರಿ, ಶರಣಪ್ಪ, ಉಮರಸಾಬ್, ಮಹಾಂತೇಶ ಸಣಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net