ಅವಕಾಶ ಸದ್ಬಳಕೆ ಮಾಡಿಕೊಳ್ಳಿ

5 vikram 2
Published on

ಧಾರವಾಡ: ಪ್ರತಿಭೆ ಹೊರಹೊಮ್ಮಿಸಲು ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮಗೂ ತಮ್ಮ ಸಂಸ್ಥೆಗಳಿಗೂ ಕೀರ್ತಿ ತರಬೇಕು. ಸ್ಪರ್ಧೆಗಳಲ್ಲಿ ಸೋಲು, ಗೆಲುವಿಗಿಂತ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ನಗರದ ಸವದತ್ತಿ ರಸ್ತೆಯಲ್ಲಿನ ಕೆ.ಇ. ಬೋರ್ಡಿನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕೆ.ಇ. ಬೋರ್ಡ ಅಂಗ ಸಂಸ್ಥೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಅಂಗ ಸಂಸ್ಥೆಗಳ ಕ್ರೀಡಾಕೂಟದ ಸಂಘಟನೆಗೆ ಕರ್ನಾಟಕ ಎಜ್ಯುಕೇಶನ್ ಬೋರ್ಡ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಇ ಬೋರ್ಡಿನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ಗೆಲುವು ಸೋಲುಗಳಿಗಿಂತ ಒಟ್ಟಿಗೆ ಕಲೆಯಲು ಅನುವು ಮಾಡಿಕೊಡುವುದೆ ಇಂತಹ ಕ್ರೀಡಾಕೂಟಗಳ ಸಂಘಟನೆಯ ಪ್ರಮುಖ ಉದ್ದೇಶ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಆನಂದ ಯಲಿಗಾರ, ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಕೆ.ಇ. ಬೋರ್ಡಿನ 14 ಅಂಗ ಸಂಸ್ಥೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಟದಲ್ಲಿ ಪಾಲ್ಗೊಂಡಿದ್ದರು.
ಕಾಲೇಜು ಪ್ರಾಂಶುಪಾಲ ಮೋಹನ ಸಿದ್ಧಾಂತಿ ಸ್ವಾಗತಿಸಿದರು. ಈಶ್ವರರಾವ ಕರಾತ ನಿರೂಪಿಸಿದರು. ಕ್ರೀಡಾಧಿಕಾರಿ ವಸಂತ ಮುರ್ಡೇಶ್ವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net