ಅವಕಾಶ ಸದುಪಯೋಗವಾಗಲಿ

IMG20230616113504 (2)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನದಲ್ಲಿ ಯಾವುದೇ ಕಾರ್ಯವನ್ನು ಪ್ರಾರಂಭಿಸಲು ಉತ್ಸಾಹ ಇರಬೇಕು. ಪ್ರತಿಭೆ, ಕೌಶಲ ಹಾಗೂ ಜ್ಞಾನದ ಜತೆಗೆ ಸಿಕ್ಕ ಅವಕಾಶ ಸದ್ಬಳಿಕೆ ಮಾಡಿಕೊಳ್ಳುವ ಚಾಕಚಕ್ಯತೆ ಹೊಂದಿರಬೇಕು. ಕಾಲ ಮತ್ತು ಅವಕಾಶ ಕಾಯುವುದಿಲ್ಲ. ಅದನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಿ ಎಂದು ಅವಸರ್ ಪ್ರತಿಷ್ಠಾನ ಟ್ರಸ್ಟ್ ಸಂಸ್ಥಾಪಕ ಆನಂದ ಚತುರ್ವೇದಿ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ವೇಮನ ಪೀಠದಲ್ಲಿ ಉನ್ನತ ಭಾರತ ಅಭಿಯಾನ ಕೋಶ, ಸಮಾಜ ಕಾರ್ಯ ವಿಭಾಗ ಮತ್ತು ಬೆಂಗಳೂರಿನ ಅವಸರ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಗುವಿಗೆ ಶಿಷ್ಯವೇತನ ನೀಡುವುದರಿಂದ ಪೀಳಿಗೆಯಿಂದ ಪೀಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ಸಹಕಾರಿ. 2013ರಿಂದ ಅವಸರ ಫೌಂಡೇಶನ್‌ನಿಂದ 250 ವಿದ್ಯಾರ್ಥಿಗಳು ಶಿಷ್ಯವೇತನದ ಪ್ರಯೋಜನ ಪಡೆದಿದ್ದಾರೆ. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಮಯ ಕೊಡಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಸಂಗೀತಾ ಮಾನೆ ಮಾತನಾಡಿದರು. ಉನ್ನತ ಭಾರತ ಅಭಿಯಾನ ಕೋಶದ ಸಂಯೋಜಕಡಾ. ಎನ್. ರಾಮಾಂಜನೇಯಲು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ನಿರ್ದೇಶಕಿ ಮಾಳವಿಕಾ ಚತುರ್ವೇದಿ, ಡಾ. ಚೇತನ ಜೆ.ಡಿ, ಅಧ್ಯಾಪಕರಾದ ಡಾ.ರೇಣುಕಾ ಅಸಗಿ, ಡಾ. ರವೀಂದ್ರ, ವೇಮನ ಪೀಠದ ಸಂಯೋಜಕ ಪ್ರೊ. ನೀಲಗುಂದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net