ಅಳ್ನಾವರದಲ್ಲಿ ಸಂಡೆ ಲಾಕ್​ಡೌನ್ ಫಲಪ್ರದ

5 ALN 1
Published on

ಅಳ್ನಾವರ: ರಾಜ್ಯ ಸರ್ಕಾರ ಜಾರಿಗೊಳಿಸಿದ ಭಾನುವಾರ ಲಾಕ್​ಡೌನ್ ತಾಲೂಕಿನಾದ್ಯಂತ ಫಲಪ್ರದವಾಯಿತು.

ಬೆಳಗ್ಗೆಯಿಂದ ಎಲ್ಲ ಅಂಗಡಿ-ಹೋಟೆಲ್​ಗಳು ಬಂದ್ ಆಗಿದ್ದವು. ಖಾಸಗಿ ಆಸ್ಪತ್ರೆ, ಔಷಧ ಅಂಗಡಿ, ಹಾಲಿನ ಅಂಗಡಿಗಳು ಮಾತ್ರ ತೆರೆದಿದ್ದವು. ಮಾಸ್ಕ್ ಧರಿಸದೆ ವಿನಾಕಾರಣ ತಿರುಗಾಡುತ್ತಿದ್ದ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು. ಪರಸ್ಥಳದ ವಾಹನಗಳನ್ನು ತಪಾಸಣೆ ಮಾಡಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಮರಳಿ ಕಳುಹಿಸಿಕೊಟ್ಟರು.

ಕಳೆದೊಂದು ತಿಂಗಳಿಂದ ರೈಲಿನ ಮೂಲಕ ರಾಜ್ಯ, ವಿದೇಶಗಳಿಂದ ಆಗಮಿಸುವ ಜನರಿಗೆ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯಿಂದ ಥರ್ಮಲ್ ಸ್ಕೀನಿಂಗ್ ನಡೆಸಿ ಖಾಸಗಿ ವಾಹನಗಳ ಮೂಲಕ ಸ್ವಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಭಾನುವಾರ ಕರ್ಫ್ಯೂ ಯಶಸ್ವಿಗೊಳಿಸಲು ಪೊಲೀಸ್, ಕಂದಾಯ, ಪಪಂ ಸಿಬ್ಬಂದಿ ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net