

ಅಳ್ನಾವರ: ಪಟ್ಟಣದ ಮರಾಠ ಮಂಗಲ ಕಾರ್ಯಾಲಯದಲ್ಲಿ ಮಾ. 14ರಂದು ಅಳ್ನಾವರ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಶ್ರೀ ಸಂತ ಶಿಶುನಾಳ ಶರೀ ಮಹಾವೇದಿಕೆ, ಶರಣ ಅಕ್ಕಮಹಾದೇವಿ ಮಹಾಮಂಟಪ, ಉಡá-ಪಿ ಶ್ರೀ ಪೇಾವರ ಮಠದ ಪೂಜ್ಯ ವಿಶ್ವೇಶ ತೀರ್ಥರು ಮಹಾದ್ವಾರದಲ್ಲಿ ಸಮ್ಮೇಳನ ಜರá-ಗಲಿದೆ. ಅಂದು ಬೆಳಗ್ಗೆ 8.30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಅಮರೇಶ ಪಮ್ಮಾರ, ನಾಡಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಪರಿಷತ್ ಧ್ವಜಾರೋಹಣವನ್ನು ಕಸಾಪ ಅಳ್ನಾವರ ತಾಲೂಕಾಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ ನೆರವೇಸá-ವರು. ಸಮ್ಮೇಳವನ್ನು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿ ಹಿರಿಯ ಸಾಹಿತಿ ಡಾ. ಬಿ.ಎಂ. ನಾಗಯ್ಯ ಉದ್ಘಾಟಿಸá-ವರು. ಧಾರವಾಡ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ, ಶಾಸಕ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆ ವಹಿಸá-ವರು.
ಮಧ್ಯಾಹ್ನ 12 ಗಂಟೆಗೆ ಗಡಿ ಪ್ರದೇಶದಲ್ಲಿ ಭಾಷಾ ಬಾಂಧವ್ಯ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಬುಡಕಟ್ಟು ಜನಾಂಗ ಮತ್ತು ಸಂಸ್ಕೃತಿ ಕುರಿತು 2ನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಕವಿ ಗೋಷ್ಠಿ ನಡೆಯಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕಸಾಪ ಅಳ್ನಾವರ ತಾಲೂಕಾಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ ಅಧ್ಯಕ್ಷತೆ ವಹಿಸá-ವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸಮಾರೋಪ ನá-ಡಿಗಳನ್ನಾಡá-ವರು. ಸಮ್ಮೇಳನ ಸರ್ವಾಧ್ಯಕ್ಷ ಎಸ್. ಬಿ. ಪಾಟೀಲ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡá-ವರು.
ಸಮ್ಮೇಳನಾಧ್ಯಕ್ಷರ ಪರಿಚಯ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಶಿವನಗೌಡ ಬಿ. ಪಾಟೀಲ ಆ್ಕಯೆಾಗಿದ್ದಾರೆ. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ಗ್ರಾಮದವರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಟ್ಟಣದ ಸವೋದಯ ಶಿಕ್ಷಣ ಸಂಸ್ಥೆಯ ಎನ್ಇಎಸ್ ಪ್ರೌಢಶಾಲೆಯಲ್ಲಿ, ಪದವಿ ಶಿಕ್ಷಣವನ್ನು ಧಾರವಾಡದ ಕರ್ನಾಟಕ ಕಾಲೇಜ್ನಲ್ಲಿ, ಬಳ್ಳಾರಿಯಲ್ಲಿ ಬಿ.ಇಡಿ. ಪದವಿ ಪಡೆದರು. 1970ರಲ್ಲಿ ಪಟ್ಟಣದ ಸವೋದಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡು 34 ವರ್ಷ ಸೇವೆ ಸಲ್ಲಿಸಿ, 2005ರಲ್ಲಿ ನಿವೃತ್ತರಾದರು. 1974ರಲ್ಲಿ ನಾಗರತ್ನಾ ಅವರೊಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಲೇಜ್ ದಿನಗಳಲ್ಲಿ 1968ರಲ್ಲಿ ಕರ್ನಾಟಕ ಕಾಲೇಜ್ನ ಸುವರ್ಣ ಮಹೋತ್ಸವದಲ್ಲಿ ಅರ್ಥಶಾಸ್ತ್ರ ವಿಭಾಗದ ಕಾರ್ಯದರ್ಶಿಯಾಗಿ ಸಾಮಾಜಿಕ ಸೇವೆ ಆರಂಭಿಸಿದರು. 1974ರಲ್ಲಿ ಅಳ್ನಾವರ ಯುವಕ ಮಂಡಲ ಕಾರ್ಯದರ್ಶಿಯಾಗಿ, 1978ರಿಂದ ವೀರಶೈವ ಸಮಾಜ ಟ್ರಸ್ಟ್ ಗೌರವ ಕಾರ್ಯದರ್ಶಿಯಾಗಿ, 1980ರಿಂದ ಎಬಿವಿಪಿ ಅಧ್ಯಕ್ಷರಾಗಿ, ಜನಗಣತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಿಹಿಸಿದ್ದಾರೆ. ಅಳ್ನಾವರ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ, ತಾಲೂಕು ಹೋರಾಟ ಸಮಿತಿಯಲ್ಲಿ ಪ್ರಮುಖ ಸಲಹೆಗಾರರಾಗಿ, ಧಾರವಾಡ ತಾಲೂಕಿನ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕಸಾಪ ತಾಲೂಕಾಧ್ಯಕ್ಷರಾಗಿ ಸೇವೆಗೈದರು. ನಿವೃತ್ತಿ ಬಳಿಕ ಕೃಷಿಯೊಂದಿಗೆ 2009-10ರಲ್ಲಿ ಶ್ರೀ ಸಾಯಿ ಶಿಕ್ಷಣ ಸಂಸ್ಥೆ ಆರಂಭಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 2003ಲ್ಲಿ ಧಾರವಾಡ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. 2004ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.
ಸರಳವಾಗಿ ಆಚರಿಸಲು ನಿರ್ಧಾರ: ಕರೊನಾ ಸೋಂಕಿನ ನಿಯಂತ್ರಣಕ್ಕೆ ಸರ್ಕಾರದ ಆದೇಶದ ಮೇರೆಗೆ ಅಳ್ನಾವರ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪಟ್ಟಣದ ಮರಾಠ ಮಂಗಲ ಕಾರ್ಯಾಲಯದ ಆವರಣದಲ್ಲಿ ಬೆಳಗ್ಗೆ ರಾಷ್ಟ್ರ, ನಾಡ, ಪರಿಷತ್ ಧ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭಗೊಳ್ಳಲಿದೆ. ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಡಾ. ಬಿ.ಬಿ. ಮೂಡಬಾಗಿಲ ತಿಳಿಸಿದ್ದಾರೆ.
ಕುಂದಗೋಳ ಸಮ್ಮೇಳನಕ್ಕೂ ಕರೊನಾ ಭೀತಿ: ಕರೊನಾ ವೈರಸ್ನಿಂದಾಗಿ ಒಂದು ವಾರ ರಾಜ್ಯದಲ್ಲಿ ಸಭೆ, ಸಮಾರಂಭಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ಮಾ. 15ರಂದು ಹ್ಮಮಿೊಂಡಿರá-ವ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರಳವಾಗಿ ಆಚರಿಸಲಾಗುವುದು ಎಂದು ಕಸಾಪ ಕುಂದಗೋಳ ಗೌರವಾಧ್ಯಕ್ಷ ಎ.ಬಿ. ಉಪ್ಪಿನ ತಿಳಿಸಿದ್ದಾರೆ. ಕರೊನಾ ರೋಗ ಹರಡದಂತೆ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಮ್ಮೇಳನ ಗೌರವಾಧ್ಯಕ್ಷರಾಗಿ ಸಾಹಿತಿ ಆರ್.ಎಂ. ಹೊನಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ಮಹಾವೇದಿಕೆಗೆ ಕರೆತರಲಾಗುವುದು. ಮೆರವಣಿಗೆಗೆ ನಿವೃತ್ತ ಶಿಕ್ಷಕ ಸಂಗಯ್ಯ ಗುಡಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8.30ಕ್ಕೆ ಗ್ರಾಪಂ ಅಧ್ಯಕ್ಷ ನಬೀಬಸಾಬ್ ಉಪ್ಪಾರ ರಾಷ್ಟ್ರ ಧ್ವಜಾರೋಹಣ, ಎಸ್ಡಿಎಂಸಿ ಅಧ್ಯಕ್ಷ ಮೌಲಾಸಾಬ್ ಲಾಠಿ, ನಾಡಧ್ವಜ, ಕಸಾಪ ತಾಲೂಕಾಧ್ಯಕ್ಷ ಎಸ್.ಎನ್. ಅರಳಿಕಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸá-ವರು. ಡಾ. ಮಹೇಶ ಜೋಶಿ ಬೆಳಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟಿಸá-ವರು. ಮಧ್ಯಾಹ್ನ 12.30ಕ್ಕೆ ತತ್ತ್ವದ ಸಾಹಿತ್ಯ ಕುರಿತು 1ನೇ ಗೋಷ್ಠಿ, ಮಾಧ್ಯಮಗಳು ಹಾಗೂ ಸಾಮಾಜಿಕ ಪ್ರಜ್ಞೆ ಕುರಿತು 2ನೇ ಗೋಷ್ಠಿ, 3ನೇ ಗೋಷ್ಠಿ ಕವಿ ಗೋಷ್ಠಿ ನಡೆಯಲಿದೆ. ಸಂಜೆ 6.30ಕ್ಕೆ ಸನ್ಮಾನ, ಸಮಾರೋಪ ಸಮಾರಂಭ ನಡೆಯಲಿದೆ ಎಂದರು.