ಅಳ್ನಾವರ ತಾಲೂಕಿನಾದ್ಯಂತ ಹೋಳಿ ಹಬ್ಬದ ಸಂಭ್ರಮ

10 ALN 1
Published on

ಅಳ್ನಾವರ: ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಜನರು ಮಂಗಳವಾರ ಸಂಭ್ರಮದಿಂದ ಆಚರಿಸಿದರು.

ಸೋಮವಾರ ರಾತ್ರಿ ಪಟ್ಟಣದ ಸುಭಾಷ್ ರಸ್ತೆ, ಕಲ್ಮೇಶ್ವರ ದೇವಸ್ಥಾನ ಆವರಣ, ಚನ್ನಮ್ಮ ಚೌಕ, ನೆಹರು ನಗರ, ಇಂದಿರಾ ನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯುವಜನತೆ ಹಿಂದಿನ ಸಂಪ್ರದಾಯದಂತೆ ಅರಣ್ಯ ಪ್ರದೇಶದಲ್ಲಿ ಮರ ಕಡಿದು ದಿಮ್ಮೆ ತಂದು, ಒಣಹá-ಲ್ಲಿನಿಂದ ಕಾಮಣ್ಣನನ್ನು ತಯಾರಿಸಿ ಪ್ರತಿಷ್ಠಾಪಿಸಿದ್ದರು. ಮಂಗಳವಾರ ಬೆಳಗ್ಗೆಯಿಂದ ಮಕ್ಕಳು, ಯುವಕರು, ಹಿರಿಯರು ಸೇರಿಕೊಂಡು ಬಣ್ಣದ ಆಟವನ್ನು ಆಡಿದರು. ಯುವಕರು ಊರೆಲ್ಲ ಸುತ್ತಾಡಿ ಪರಸ್ಪರ ಬಣ್ಣ ಎರಚಿ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ವಿವಿಧೆಡೆ ನಿರ್ವಿುಸಿದ ನೀರಿನ ಕಾರಂಜಿಗಳಲ್ಲಿ ಹಾಡುಗಳೊಂದಿಗೆ ಕುಣಿದರು. ಪಟ್ಟಣದ ಆಜಾದ್ ರಸ್ತೆಯಲ್ಲಿ ಯುವಕರಿಂದ ಗಡಿಗೆ ಒಡೆಯುವ ಸ್ಪರ್ಧೆ ತುರಿಸಿನಿಂದ ನಡೆಯಿತು. ನಂತರ ಕಾಮಣ್ಣನ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net