

ಕೆ.ಆರ್.ಪೇಟೆ: ಗೋವಾ ರಾಜ್ಯದ ಕೊಲಂಗುಟೆ ಬೀಚ್‌ನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆ(19 ವರ್ಷ ಮೇಲ್ಪಟ್ಟವರು)ಯಲ್ಲಿ ಪಟ್ಟಣದ ಯೋಗಪಟು ಎಸ್.ಎಂ.ಅಲ್ಲಮಪ್ರಭು ಚಿನ್ನದ ಪದಕ ಪಡೆದಿದ್ದಾರೆ.
ತಮಿಳುನಾಡಿನ ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಫೌಂಡೇಷನ್ ಸಂಸ್ಥಾಪಕ ಅಜಿತ್‌ಕುಮಾರ್ ಅ. 8ರಿಂದ 10ರತನಕ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದ ಅಲ್ಲಮಪ್ರಭು ಚಿನ್ನದ ಪದಕ ಗೆಲ್ಲುವ ಮೂಲಕ ಥೈಲ್ಯಾಂಡ್‌ನಲ್ಲಿ 2023ರಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಹಣಕಾಸಿನ ನೆರವು ನೀಡಿದ್ದರು.