

ಶಹಾಪುರ: ಸಮಾನ ಮನಸ್ಕರಿಂದ ಹುಟ್ಟಿಕೊಂಡಿರುವ ದಿ.ಮುಸ್ಲಿಂ ಸೌಹಾರ್ದ ಸಹಕಾರ ಸಂಘವು ೨.೭೪ಕೋಟಿ ಬಂಡವಾಳದ ವಹಿವಾಟು ನಡೆಸಿ ಪ್ರಸಕ್ತ ಸಾಲಿನಲ್ಲಿ ೭.೮೫ಲP್ಷÀ ಲಾಭಾಂಶ ಹೊಂದಿದೆ ಎಂದು ಸಂಘದ ಅಧ್ಯP್ಷÀ ಯೂಸೂಫ್ ಸಿದ್ದಕಿ ತಿಳಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸಂಘದ ೩೦ನೇ ವಾರ್ಷಿಕೋತ್ಸವ ಸಭೆಯಲ್ಲಿ ಮಾತನಾಡಿ, ೧,೪೫೦ ಸದಸ್ಯರನ್ನು ಹೊಂದಿರುವ ಸಂಘವು, ಬೀದಿ ಬದಿ ಹಾಗೂ ಸಗಡು ವ್ಯಾಪಾರ ಕೈಗೊಳ್ಳುವ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ತನ್ನದೇ ಆದ ಹೊಸ ಮೈಲುಗಲ್ಲು ಸಾಧಿಸಿದೆ ಎಂದರು.
ಅಲ್ಪಸAಖ್ಯಾತರಿಗೆ ನೆರವು ನೀಡಬೇಕು ಎಂದು ಉz್ದೆÃಶದಿಂದ ೩೦ ವರ್ಷಗಳ ಹಿಂದೆ ಇನಾಯಿತ್ ರಹಮಾನ್ ಸಿದ್ದಕಿ ಬ್ಯಾಂಕ್ ಸ್ಥಾಪನೆ ಮಾಡಿ, ಅದರ ಅಧ್ಯಕ್ಷರಾಗಿ ಕೆಲಸ ಮಾಡಿ ಉತ್ತಮ ನಿರ್ವಹಣೆ ಮಾಡಿದರು. ಕಾಲ ಬದಲಾದಂತೆ ಬ್ಯಾಂಕ್‌ನ ಸ್ವರೂಪ ಬದಲಾಗಬೇಕಾಗಿದೆ. ಬರುವ ದಿನದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಬಂಗಾರದ ಅಡಮಾನ ಸಾಲ ಹಾಗೂ ಇ-ಸ್ಟಾö್ಯಂಪ್ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸಂಘದ ಎಲ್ಲ ನಿರ್ದೇಶಕರು ಸಹಕಾರ ಬೇಕು ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯP್ಷÀ ಅಬಿದ್ ಹುಸೇನ್ ಜಖಮಿ, ನಿರ್ದೇಶಕರಾದ ನೂರಲï ಹಸನ್ ಇನಾಮದಾರ, ಅವದ್ ಅಮರ್
ಚಾವುಸ್, ಇಪ್ತಿಯಾಜ್ ಶೇರಬಾಹಿ, ಅಬ್ದುಲ್ ಮತೀನ್‌ಸಗರಿ, ಶೇಖ್‌ಅಬೀದ್ ಬಡೇಘರ್ ಕಾನೂನು ಸಲಹೆಗಾರ ಸಯ್ಯದ್
ಇಬ್ರಾಹಿಂಸಾಬï ಜಮದಾರ ಹಾಗೂ ಸಯ್ಯದ ಖಾದ್ರಿ, ರಫೀಕ್ ಚೌದ್ರಿ, ಅಮರ ಬಿನ್ ಚಾವುಸ್, ಸಯ್ಯದ್
ಸಫಿಯುದ್ದೀನ್ ಖಾದ್ರಿ ಮತ್ತು ಷೇರು ಸದಸ್ಯರು ಉಪಸ್ಥಿತರಿದ್ದರು.