ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನೇಮಿಸಿದಕ್ಕೆ:ಮಹಮ್ಮದ್ ದಾವೂದ್

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನೇಮಿಸಿದಕ್ಕೆ:ಮಹಮ್ಮದ್ ದಾವೂದ್
Published on

ಹಾಸನ: ಕಾಂಗ್ರಸ್‌ನ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ನನ್ನ ನೇಮಕ ಮಾಡಿದ ಪಕ್ಷದ ಎಲ್ಲಾ ಮುಂಖಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನೂತನ ಅಧ್ಯಕ್ಷ ಮಹಮ್ಮದ್ ದಾವೂದ್ ತಿಳಿಸಿದರು.
ಸರಕಾರದ ಸೌಲಭ್ಯಗಳನ್ನು ಜಿಲ್ಲೆಯ ಅಲ್ಪಸಂಖ್ಯಾತರಿಗೆ ಒದಗಿಸುವುದು. ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಪಾಸ್ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಹ ಶೈಕ್ಷಣಿಕ ವ್ಯವಸ್ಥೆ ಹಾಗೂ ನಮ್ಮ ನಮ್ಮ ಸಮಾಜಕ್ಕೆ ಕೌಶಲ್ಯವನ್ನು ಹೊಂದಿರುವ ಜನರಿಗೆ ಬಾರಿ ಕೈಗಾರಿಕೋದ್ಯಮಿಗಳು ಆಗುವಂತಹ ವಾತಾವರಣ ನಿರ್ಮಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರುಗಳು, ಕಾರ್ಯಕರ್ತರ ಸಲಹೆ ಮೇರೆಗೆ ನನ್ನ ಸ್ಥಾನಕ್ಕೆ ನ್ಯಾಯವನ್ನು ನೀಡುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ನಾನು ಮಾಡುತ್ತೇನೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮವಾದ ಆಡಳಿತವನ್ನು ನೀಡುತ್ತಿದೆ ಪಕ್ಷದ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುಲು ಶ್ರಮಿಸುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷನಾಗಿ ನೇಮಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಇಮ್ರಾನ್ ಪ್ರತಾಪ್ ಗಡಿ, ಮುಖ್ಯಮಂತ್ರಿಗಳು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ನಾಯಕರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪ ಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ, ಜಾಕಿರ್ ಹುಸೇನ್, ಕಾಂಗ್ರೇಸ್ ಮುಖಂಡ ಖಡಾಖಡಿ ಪೀರ್ ಸಾಬ್,ಅಮ್ಮದ್ ಖಾನ್, ಮುಜಮಿಲ್ ಖಾನ್, ಮುಸವೀರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net