ಅಲ್ಪಸಂಖ್ಯಾತ ಸಮುದಾಯದವರಿಗೆ ಆದ್ಯತೆ ನೀಡಿ

Shabbira Jagirdar, Vijayapura, Vidhan Parishad Election, Legislative Assembly, Minorities,
ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ವಿಭಾಗದ ಸಭೆಯಲ್ಲಿ ಅಬ್ಡಲ ಹಮೀದ ಮುಶ್ರಿಫ್ ಮಾತನಾಡಿದರು. ಮಹ್ಮದರಫೀಕ ಟಪಾಲ್, ಆಜಾದ ಪಟೇಲ್, ಎಸ್.ಎಂ. ಪಾಟೀಲ ಗಣಿಹಾರ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಗೆ ಈ ಬಾರಿ ಅಲ್ಪಸಂಖ್ಯಾತ ಸಮುದಾಯದವರಿಗೆ ಆದ್ಯತೆ ನೀಡಬೇಕೆಂದು ಸರ್ವಾನುಮತದಿಂದ ಒತ್ತಾಯಿಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಬ್ಬೀರ ಜಾಗೀರದಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಸಭೆಯಲ್ಲಿ, ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತ ಮುಖಂಡರು ಸೇರಿ ಅಲ್ಪಸಂಖ್ಯಾಂತ ಮುಖಂಡರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಇದು ಅತ್ಯವಶ್ಯಕವಾಗಿದ್ದು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ವರಿಷ್ಠರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಮುಖಂಡರಾದ ಅಬ್ದುಲ್ ಹಮೀದ ಮುಶ್ರಿಫ್, ಮಹ್ಮದ ರಫೀಕ ಟಪಾಲ್, ಆಜಾದ ಪಟೇಲ್, ಎಸ್.ಎಂ. ಪಾಟೀಲ ಗಣಿಹಾರ, ಚಾಂದಸಾಬ ಗಡಗಲಾವ, ಜಮೀರ ಬಕ್ಷೀ, ಎಂ.ಸಿ. ಮುಲ್ಲಾ, ಐ.ಎಂ. ಇಂಡೀಕರ, ಡಿ.ಎಚ್. ಕಲಾಲ, ಎಚ್.ಎಂ. ಬಾಗವಾನ, ಯಾಕುಬ ನಾಟೀಕಾರ, ಫಯಾಜ ಕಲಾದಗಿ, ಅನ್ವರ ಜಮಾದಾರ, ದಸ್ತಗೀರ ಸಾಲೋಟಗಿ, ಇಲಿಯಾಸ ಸಿದ್ದಿಕಿ, ರಜಾಕಸಾಬ ಕಾಖಂಡಕಿ, ತಾಜುದ್ದೀನ್ ಖಲೀಫಾ, ಅಲ್ಲಾಬಕ್ಷ, ಅಸ್ಮಾ ಕಾಲೇಬಾಗ, ಹಮೀದಾ ಪಟೇಲ, ಅಕ್ಬರ್ ಗೋಕಾವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net