ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Dr Sharanappa Halse
Published on

ಕಲಬುರಗಿ: ಅಲ್ಪಸಂಖ್ಯಾತರ ರ‍್ಗದ ವಿದ್ಯರ‍್ಥಿಗಳಿಗೆ ರ‍್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್​ಓಯು) ಕರ‍್ಸ್​ಗಳಲ್ಲಿ ಉಚಿತ ಶಿಣ ನೀಡಲು ಜು.೯ರಂದು ವಿವಿ ಹಾಗೂ ರಾಜ್ಯದ ಅಲ್ಪಸಂಖ್ಯಾತರ ಇಲಾಖೆ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಕ್ತ ವಿವಿ ಕುಲಪತಿ ಪೊ.ಶರಣಪ್ಪ ವಿ. ಹಲ್ಸೆ ತಿಳಿಸಿದರು.

ಮುಸ್ಲಿಂ, ಸಿಖ್​, ಜೈನ, ಕೆಸ್ತ್​ ಸೇರಿ ಆರು ಅಲ್ಪಸಂಖ್ಯಾತರ ರ‍್ಗದ ವಿದ್ಯರ‍್ಥಿಗಳ ಶಿಕ್ಷಣಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಐದು ಕೋಟಿ ರೂ. ಅನುದಾನ ನೀಡಿದೆ. ಅನುದಾನದಲ್ಲಿ ಸುಮಾರು ೪೫೦೦ ವಿದ್ಯರ‍್ಥಿಗಳು ವಿವಿಧ ಕರ‍್ಸ್​ ಉಚಿತವಾಗಿ ಕಲಿಯಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರ‍್ಹತೆ ಆಧಾರದ ಮೇಲೆ ಪ್ರವೇಶ ಕಲ್ಪಿಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್​ ಅಹ್ಮದ್​ ಒಪ್ಪಂದಕ್ಕೆ ಸಾಯಾಗಲಿದ್ದಾರೆ. ಮುಂದಿನ ರ‍್ಷ ಅನುದಾನ ನೀಡುವ ಭರವಸೆ ಇದ್ದು, ಪ್ರತ್ಯೇಕವಾಗಿ ಅಲ್ಪಸಂಖ್ಯಾತರ ಸೆಲ್​ ಆರಂಭಿಸಲಾಗುವುದು ಎಂದು ಹೇಳಿದರು.

ವಿವಿಯಲ್ಲಿ ಸ್ರ‍್ಧಾತ್ಮಕ ವಿಶೇಷವಾಗಿ ಕೌಶಲಾಭಿವೃದ್ಧಿಗೆ ಪೂರಕ ಕರ‍್ಸ್​ಗಳಿದ್ದು, ಉದ್ಯೋಗ ಒದಗಿಸಲು ಪ್ಲೆಸ್​ಮೆಂಟ್​ ಸೆಲ್​ ಪ್ರಾರಂಭಿಸಲಾಗಿದೆ. ಡಿಸೆಂಬರ್​ದಲ್ಲಿ ಉದ್ಯೋಗ ಮೇಳ ಆಯೋಜಿಸಲು ನರ‍್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ, ಭೂ ವಿಜ್ಞಾನ ಹಾಗೂ ಉದ್ಯೋಗಾಧರಿತ ಕರ‍್ಸ್​ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವಿವಿಯಲ್ಲಿ ೧೫೦೦ ಸಿಬ್ಬಂದಿ ಕರ‍್ಯನರ‍್ವಹಿಸುತ್ತಿದ್ದು, ಸಂಪರ‍್ಣ ವಿವಿಯೇ ಸಂಪನ್ಮೂಲ ಕ್ರೋಢಿಕರಿಸಿ ಎಲ್ಲ ನಿಭಾಯಿಸುತ್ತಿದೆ. ಶೀಘ್ರ ಫಲಿತಾಂಶ ಪ್ರಕಟಣೆಗೆ ಮೌಲ್ಯಮಾಪನ ಡಿಜಿಟಲೀಕರಣ ಮಾಡಲಾಗಿದೆ ಎಂದರು.

ಮುಕ್ತ ವಿವಿಯ ಕಲಬುರಗಿ ಪ್ರಾದೇಶಿಕ ಕೇಂದ್ರದ ನರ‍್ದೇಶಕ ಡಾ.ಸಂಗಮೇಶ ಹಿರೇಮಠ, ಯಾದಗಿರಿ ಕೇಂದ್ರದ ನರ‍್ದೇಶಕ ಹಣಮಂತ ಕಾಳನೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net