ಅಲ್ಪ ಮೊತ್ತಕ್ಕೆ ಕುಸಿದ ಪಂಜಾಬ್

IMG-20240105-WA0030
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನ ಸಿ ಗುಂಪಿನ ಮೊದಲ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದ ವೇಗಿ ವಾಸುಕಿ‌ ಕೌಶಿಕ್ ದಾಳಿಗೆ ನಲುಗಿದ ಪಂಜಾಬ್ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಚಾಬ್ ಪ್ರಧಮ ಇನ್ನಿಂಗ್ಸ್ ನಲ್ಲಿ 152 ರನ್ ಮೊತ್ತಕ್ಕೆ‌ಆಲೌಟ್ ಆಯಿತು. ಕೌಶಿಕ್ 7 ವಿಕೆಟ್ ಕಬಳಿಸಿದರು. ಇನ್ನೊಬ್ಬ ವೇಗಿ ವೈಶಾಖ‌ ವಿಜಯಕುಮಾರ್ 2, ರಣಜಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ರೋಹಿತ್ ಕುಮಾರಗ ಎ.ಸಿ. 1 ವಿಕೆಟ್ ಪಡೆದರು.
ಭೋಜನ ವಿರಾಮದ ವೇಳೆಗೆ ಪ್ರವಾಸಿ ತಂಡ ಪಂಜಾಬ್ 99 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಉಳಿದ 5 ವಿಕೆಟ್ ಗಳನ್ನು ಬೇಗನೇ ಕಳೆದುಕೊಂಡು ಆಲೌಟ್ ಆಯಿತು.

ಪಂಜಾಬ್ ಪರ ನೇಹಲ‌ ವಧೇರಾ ಅತ್ಯಧಿಕ 44 ರನ್ ಬಾರಿಸಿದರು. ಪ್ರಭಸಿಮ್ರಾನ್ ಸಿಂಗ್ 5ರನ್ , ಅಭಿಷೇಕ ಶರ್ಮಾ 26, ನಮನ ಧೀರ 4, ಮನದೀಪ‌ ಸಿಂಗ್ 1, ಗೀತಾಂಶ ಖೇರ 27, ಮಯಾಂಕ್ ಮಾರ್ಕಂಡೆ 26 ರನ್ ಬಾರಿಸಿದರು.

ಕರ್ನಾಟಕ ಪರ ಈ ಪಂದ್ಯದ ಮೂಲಕ ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್ ಎ.ಸಿ. ರಣಜಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net