ಅಲೆದಾಟ ತಪ್ಪಿಸಲು ಪಡಿತರ ಉಪಕೇಂದ್ರಕ್ಕೆ ಚಾಲನೆ

07BTP01
ಬಿಲಗುಂದ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಕೆ.ಮಹದೇವ್ ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡಿದರು. ಸಿ.ಎನ್ ಪ್ರಸನ್ನಕುಮಾರ್, ಕೃಷ್ಣೇಗೌಡ, ಸಣ್ಣಸ್ವಾಮಿ, ಹುಚ್ಚಪ್ಪ, ಮಂಜುನಾಥ್, ಯೋಗಾನಂದ್, ಅವಿನಾಶ್ ಇದ್ದರು.
Published on

ಬೆಟ್ಟದಪುರ: ದೂರದ ಊರುಗಳಿಗೆ ಕಾಲ್ನಡಿಗೆಯಲ್ಲಿ ಹೀಗಿ ಗ್ರಾಮೀನ ಜನರು ಪಡಿತರ ಪಡೆಯುವುದನ್ನು ತಪ್ಪಿಸುವ ಸಲುವಾಗಿ ತಾಲೂಕಿನ ಸಣ್ಣ ಗ್ರಾಮದಲ್ಲಿಯೂ ಪಡಿತರ ಉಪಕೇಂದ್ರ ತೆರೆದು ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಸಮೀಪದ ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲಗುಂದ ಗ್ರಾಮದಲ್ಲಿ ಸೋಮವಾರ ಪಡಿತರ ವಿತರಣೆಯ ನೂತನ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಹಿಂದೆ ಆಡಳಿತ ನಡೆಸಿದ ಶಾಸಕರಿಗೆ ಗ್ರಾಮೀಣ ಜನತೆಯ ಕಷ್ಟಗಳ ಬಗ್ಗೆ ಅರಿವು ಇರಲಿಲ್ಲ. ಹೀಗಾಗಿಯೇ ಯಾವುದೇ ಉಪಕೇಂದ್ರಗಳನ್ನು ತೆರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಪ್ಪರದಹಳ್ಳಿ ಸೊಸೈಟಿ ಅಧ್ಯಕ್ಷ ಸಿ.ಎನ್.ಪ್ರಸನ್ನಕುಮಾರ್, ಗ್ರಾಪಂ ಸದಸ್ಯ ಕೃಷ್ಣೇಗೌಡ, ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ಸೊಸೈಟಿ ಸಿಇಒ ಹುಚ್ಚಪ್ಪ, ಸಿಬ್ಬಂದಿ ಮಂಜುನಾಥ್, ಯೋಗಾನಂದ, ಅವಿನಾಶ್, ರವಿಕುಮಾರ್, ಸೆಸ್ಕ್ ಎಇಇ ಆಕಾಶ್, ಕಂದಾಯ ನಿರೀಕ್ಷಕ ಪ್ರದೀಪ್, ಮುಖಂಡರಾದ ಗೋವಿಂದೇಗೌಡ, ಪಾಲಾಕ್ಷ, ಶಿವಣ್ಣ ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net